ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಜನರನ್ನು ಕಾಪಾಡಲು ಅವಿರತವಾಗಿ ಪರಿಶ್ರಮಪಡುತ್ತಿರುವ ಕೊರೋನಾ ಯೋಧರಿಗೆ ಗೌರವಾರ್ಪಣೆ ಮಾಡುವ ಸಲುವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಕೇಸರಿ ಸಿನಿಮಾದ ಜನಪ್ರಿಯ ಹಾಡು ತೇರಿ ಮಿಟ್ಟಿಯ ಹೊಸ ಅವತರಣಿಕೆಯನ್ನು ಹೊರತಂದಿದ್ದಾರೆ.
ಈ ಹಾಡು ವೈದ್ಯರು, ಪೊಲೀಸರು, ಚಾಲಕರು ಮತ್ತು ಇತರ ಲಾಕ್ ಡೌನ್ ಸಂದರ್ಭದಲ್ಲಿ ಅವಿರತ ಪರಿಶ್ರಮಪಡುತ್ತಿರುವ ಕೊರೋನಾ ಯೋಧರ ಮೇಲೆ ಬೆಳಕು ಚೆಲ್ಲುತ್ತದೆ.
“ಸರ್ಹದ್ ಪೆ ಜೊ ವರ್ದಿ ಖಾಕಿ ಥಿ ಅಬ್ ಉಸ್ಕಾ ರಂಗ್ ಸಫೇದ್ ಹುವಾ” ಎನ್ನುವ ಸಾಹಿತ್ಯದ ಮೂಲಕ ಬಿಳಿ ವಸ್ತ್ರವನ್ನು ತೊಟ್ಟಿರುವ ವೈದ್ಯರ ಕಾರ್ಯವನ್ನು ಅಮೋಘವಾಗಿ ಶ್ಲಾಘಿಸಲಾಗಿದೆ.
ಕೆಲವೊಂದು ಪ್ರದೇಶಗಳಿಗೆ ಸ್ಯಾಂಪಲ್ ಸಂಗ್ರಹಿಸಲು ತೆರಳಿದ ಸಂದರ್ಭದಲ್ಲಿ ಗಾಯಗೊಂಡ ವೈದ್ಯರುಗಳ ದೃಶ್ಯವನ್ನು ಹೊಂದಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವಾರು ದೃಶ್ಯಾವಳಿಗಳನ್ನು ಈ ಹಾಡಿನ ವಿಡಿಯೋ ಹೊಂದಿದೆ.
ವಿಡಿಯೋದ ಕೊನೆಯಲ್ಲಿ ಅಕ್ಷಯ್ ಕುಮಾರ್, “ವೈದ್ಯರು ದೇವರ ಪ್ರತಿರೂಪ ಎಂದು ಹೇಳುವುದನ್ನು ನಾವು ಕೇಳಿದ್ದೇವೆ ಆದರೆ ಈಗ ದೇವರೇ ವೈದ್ಯರ ರೂಪದಲ್ಲಿ ಆಗಮಿಸಿದಂತೆ ಕಾಣುತ್ತದೆ” ಎಂದು ಹೇಳಿದ್ದಾರೆ.
सुना था डॉक्टर्स भगवन का रूप होते है लेकिन कोरोना वायरस की इस लड़ाई में देख भी लिया l #TeriMitti Tribute – an ode to our heroes in white, out now https://t.co/nbTQo60a53@ParineetiChopra @SinghAnurag79 @karanjohar @apoorvamehta18 @SunirKheterpal @bpraak @arkopravo19
— Akshay Kumar (@akshaykumar) April 24, 2020
ಗುರುವಾರ ಈ ಹಾಡಿನ ಬಗ್ಗೆ ಅಕ್ಷಯ್ ಕುಮಾರ್ ಅವರು ಘೋಷಣೆ ಮಾಡಿದ್ದರು. ಈ ವೇಳೆ ಅವರು, “ಸಂಕಷ್ಟದ ಸಂದರ್ಭದಲ್ಲಿ ನಮ್ಮ ಪ್ರೀತಿ ಪಾತ್ರರು ಮಾತ್ರ ನಮ್ಮ ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಕೆಲವರು ಸರಿಯಾಗಿಯೇ ಹೇಳಿದ್ದಾರೆ. ಇಂದು ಈ ಸಂಕಷ್ಟದ ಸಂದರ್ಭದಲ್ಲಿ ಬಿಳಿ ವಸ್ತ್ರದಲ್ಲಿರುವ ವೈದ್ಯರು ಯೋಧರಂತೆ ಸಹಾಯಕ್ಕೆ ಧಾವಿಸಿದ್ದಾರೆ” ಎಂದಿದ್ದರು.
ಹಾಡನ್ನು ರಚನೆ ಮಾಡಿದ ಬಿ ಫ್ರಾಂಕ್ ಅವರು, “ನಮಗಾಗಿ ಮತ್ತು ಜಗತ್ತನ್ನು ಉಳಿಸುವುದಕ್ಕಾಗಿ ಹಗಲು-ರಾತ್ರಿಯೆನ್ನದೆ ಅವಿರತವಾಗಿ ಶ್ರಮಿಸುತ್ತಿರುವ ಅವರಿಗೆ ಇದು ನಮ್ಮ ಗೌರವ ನಮನಗಳು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.