ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಜಾತಿ, ಧರ್ಮ, ಭಾಷೆ, ಗಡಿ, ಬಣ್ಣ ಮತ, ಮುಂತಾದ ಬೇಧಗಳನ್ನು ಮಾಡುವುದಿಲ್ಲ. ಹೀಗಾಗಿ ಈ ಬಿಕ್ಕಟ್ಟನ್ನು ಎಲ್ಲರೂ ಒಗ್ಗಟ್ಟಿನಿಂದ ಮತ್ತು ಭಾತೃತ್ವದೊಂದಿಗೆ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆಯನ್ನು ನೀಡಿದ್ದಾರೆ.
ಟ್ವೀಟ್ ಮಾಡಿರುವ ಪಿಎಂಒ ಕಾರ್ಯಾಲಯ, “ಕೋವಿಡ್ -19 ನಾಶಪಡಿಸುವ ಮುನ್ನ ಜನಾಂಗ, ಧರ್ಮ ,ಬಣ್ಣ, ಮತ ಭಾಷೆ ಮತ್ತು ಗಡಿಗಳನ್ನು ನೋಡುವುದಿಲ್ಲ. ನಮ್ಮ ಸ್ಪಂದನೆ ಮತ್ತು ಕಾರ್ಯಗಳು ಪ್ರಾಥಮಿಕವಾಗಿ ಒಗ್ಗಟ್ಟು ಮತ್ತು ಭಾತೃತ್ವ ಆಗಿರಬೇಕು. ಇದರಲ್ಲಿ ನಾವು ಒಗ್ಗಟ್ಟಾಗಿದ್ದೇವೆ” ಎಂದಿದೆ.
COVID-19 does not see race, religion, colour, caste, creed, language or borders before striking.
Our response and conduct thereafter should attach primacy to unity and brotherhood.
We are in this together: PM @narendramodi
— PMO India (@PMOIndia) April 19, 2020
ಪ್ರಸ್ತುತ ದೇಶವು ಎರಡನೇ ಹಂತದ ಲಾಕ್ಡೌನ್ ಅನ್ನು ಅನುಭವಿಸುತ್ತಿದೆ. ಹಿಂದಿನಿಂದ ಸಾಂಕ್ರಾಮಿಕ ರೋಗದ ಅಬ್ಬರ ಇಲ್ಲದ ಅಥವಾ ಕಡಿಮೆ ಇರುವ ಸ್ಥಳಗಳಲ್ಲಿ ಕೆಲವೊಂದು ವಿನಾಯಿತಿಗಳು ಇರಲಿವೆ. ಈ ಹಿನ್ನೆಲೆಯಲ್ಲಿ ಪಿಎಂಒ ಟ್ವೀಟ್ ಮಾಡಿದೆ.
ಪ್ರಸ್ತುತ ಇರುವ ಲಾಕ್ಡೌನ್ ಮೇ 3ರವರೆಗೆ ಮುಂದುವರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.