ಜಿನೆವಾ: ವಿಶ್ವದ ಪರ್ವತಾರೋಹಿಗಳ ಮೆಚ್ಚುಗೆ ಪಡೆದ ಶಿಖರಗಳಲ್ಲಿ ಒಂದಾದ ಸ್ವಿಟ್ಜರ್ಲ್ಯಾಂಡ್ನ ವಿಶ್ವಪ್ರಸಿದ್ಧ ಮ್ಯಾಟರ್ಹಾರ್ನ್ ಪರ್ವತದ ಮೇಲೆ ನಿನ್ನೆ ಭಾರತದ ರಾಷ್ಟ್ರಧ್ವಜವು ಪ್ರಾಜೆಕ್ಟರ್ ಮೂಲಕ ಬೆಳಗಿತು. ಸ್ವಿಸ್ ಲೈಟ್ ಆರ್ಟಿಸ್ಟ್ ಗೆರ್ರಿ ಹಾಫ್ಸ್ಟೆಟರ್ ಇದನ್ನು ಮೂಡಿಸಿದರು, ಭರವಸೆಯ ಮತ್ತು ಸಕಾರಾತ್ಮಕತೆಯ ಸಂದೇಶವನ್ನು ಸಾರಲು ಭಾರತೀಯ ಧ್ವಜವನ್ನು ಪರ್ವತ ಶಿಖರದ ಮೇಲೆ ಬೆಳಗಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್ ಪ್ರತಿ ರಾತ್ರಿ ಸೂರ್ಯಾಸ್ತದ ವೇಳೆ ಪ್ರಸಿದ್ಧ ಶಿಖರದಲ್ಲಿ ಬೆಳಕನ್ನು ಹರಿಸಿ ಭರವಸೆ, ಐಕಮತ್ಯ ಮತ್ತು ಪ್ರಪಂಚದಾದ್ಯಂತದ ದೇಶಗಳಿಗೆ ಮತ್ತು ಕರೋನವೈರಸ್ ಸಾಂಕ್ರಾಮಿಕ ರೋಗದ ಮುಂಚೂಣಿಯಲ್ಲಿ ಹೋರಾಡುವ ಜನರಿಗೆ ತಮ್ಮ ಬೆಂಬಲವನ್ನು ತೋರಿಸುತ್ತಿದೆ. ಧನ್ಯವಾದಗಳನ್ನು ಅರ್ಪಣೆ ಮಾಡುತ್ತಿದೆ.
ಕಳೆದ ಒಂದೆರಡು ದಿನಗಳಲ್ಲಿ, ಕಲಾವಿದ ಹಾಫ್ಸ್ಟೆಟರ್ ಯುಎಸ್, ಯುಕೆ, ಜರ್ಮನಿ, ಜಪಾನ್, ಸ್ಪೇನ್ ಮತ್ತು ಪೋರ್ಚುಗಲ್ನ ಧ್ವಜಗಳನ್ನು ಪ್ರೊಜೆಕ್ಟ್ ಮಾಡಿದ್ದಾರೆ.
ಭಾರತದ ಧ್ವಜವನ್ನು ನಿನ್ನೆ ಅಲ್ಲಿ ಬೆಳಗಿಸಲಾಗಿದ್ದು, ಈ ಬಗೆಗಿನ ದೃಶ್ಯಗಳನ್ನು ಸ್ವಿಟ್ಜರ್ಲ್ಯಾಂಡ್ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಟ್ವೀಟರ್ನಲ್ಲಿ ಹಂಚಿಕೊಂಡಿದೆ. ಇದನ್ನು ಮೋದಿ ಮರು ಟ್ವೀಟ್ ಮಾಡಿದ್ದಾರೆ.
“ಜಗತ್ತು ಕೋವಿಡ್-19 ವಿರುದ್ಧ ಹೋರಾಡುತ್ತಿದೆ. ಮಾನವೀಯತೆ ಖಂಡಿತವಾಗಿಯೂ ಇದನ್ನು ಹಿಮ್ಮೆಟ್ಟಿಸುತ್ತದೆ” ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.
The world is fighting COVID-19 together.
Humanity will surely overcome this pandemic. https://t.co/7Kgwp1TU6A
— Narendra Modi (@narendramodi) April 18, 2020
ಟೂರಿಸಂ ಅನ್ನು ಪ್ರಚಾರಗೊಳಿಸುವ ವೆಬ್ಸೈಟ್ ಜರ್ಮಟ್ ಮ್ಯಾಟರ್ಹಾರ್ನ್ ಕೂಡ ಭಾರತದ ತ್ರಿವರ್ಣ ಧ್ವಜ ಬೆಳಗುವ ಫೋಟೋವನ್ನು ಹಂಚಿಕೊಂಡಿದ್ದು, “ವಿಶ್ವದ ಅತ್ಯಂತ ಜನಸಂಖ್ಯೆಯುಳ್ಳ ದೇಶವಾದ ಭಾರತ ಕೊರೋನಾ ಸಮಸ್ಯೆಯಿಂದ ಬಳಲುತ್ತಿದೆ. ಅಷ್ಟು ದೊಡ್ಡ ದೇಶದಲ್ಲಿ ಸವಾಲು ಪ್ರಮುಖವಾಗಿದೆ. ಮ್ಯಾಟರ್ಹಾರ್ನ್ನಲ್ಲಿ ಭಾರತದ ಧ್ವಜ ಎಲ್ಲಾ ಭಾರತೀಯರಿಗೆ ನಮ್ಮ ಐಕ್ಯಮತ್ಯವನ್ನು ತೋರ್ಪಡಿಸುತ್ತದೆ ಮತ್ತು ಭರವಸೆ ಮತ್ತು ಶಕ್ತಿಯನ್ನು ನೀಡುತ್ತದೆ” ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.