ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ ಸರಕಾರವು ಬಡಜನರಿಗೆ ಹೆಲಿಕಾಪ್ಟರ್ ಮೂಲಕ ಹಣವನ್ನು ಸುರಿಸಬಹುದು ಎಂಬ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಕನ್ನಡ ಸುದ್ದಿವಾಹಿನಿ ಪಬ್ಲಿಕ್ ಟಿವಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ಜಾರಿಗೊಳಿಸಿದೆ.
“ಸುದ್ದಿವಾಹಿನಿಯು ಸುಳ್ಳು ಮಾಹಿತಿಯನ್ನು ಹರಿ ಬಿಟ್ಟಿದೆ, ಜನರಲ್ಲಿ ಆತಂಕ ಸೃಷ್ಟಿಸಿದೆ ಮತ್ತು ಸಾಮಾಜಿಕ ಅಸ್ಥಿರತೆಯನ್ನು ಉಂಟುಮಾಡಿದೆ” ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
“ಹೆಲಿಕಾಫ್ಟರ್ ಮನಿ”ಎಂಬ ಶೀರ್ಷಿಕೆಯೊಂದಿಗೆ ವಾಹಿನಿಯು ಸುದ್ದಿಯನ್ನು ಪ್ರಸಾರಗೊಳಿಸಿತ್ತು. ಇದರಲ್ಲಿ ಕೇಂದ್ರ ಸರ್ಕಾರವು ಹೆಲಿಕಾಫ್ಟರ್ ಮೂಲಕ ಹಣವನ್ನು ಸುರಿಸಲಿದೆ ಎಂದು ಹೇಳಲಾಗಿತ್ತು.
ಟ್ವಿಟರ್ ಬಳಕೆದಾರರು ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ದೂರು ನೀಡಿದ್ದರು.
ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ಫ್ಯಾಕ್ಟ್ ಚೆಕ್ ತಂಡವು ಸುದ್ದಿಯ ಸತ್ಯಾಸತ್ಯತೆಯನ್ನು ಅಲ್ಲಗಳೆದಿದೆ ಮತ್ತು ವಾಹಿನಿಗೆ ನೋಟಿಸ್ ಜಾರಿಗೊಳಿಸಿದೆ.
“ಯಾಕೆ ನಿಮ್ಮ ವಾಹಿನಿಯನ್ನು ಈ ಕೂಡಲೇ ಸ್ಥಗಿತಗೊಳಿಸಬಾರದು?”ಎಂದು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.
ಅಲ್ಲದೇ ಹತ್ತು ದಿನಗಳ ಒಳಗೆ ನೋಟಿಸ್ಗೆ ಉತ್ತರ ನೀಡುವಂತೆ ತಿಳಿಸಲಾಗಿದೆ.
PIB under Ministry of I and B has issued a notice to Public TV for Violation of Cable Television Network (Regulation)Act and Codes by Broadcasting “Helicopter Money – Helicopternalli Surithara Modi”.@PrakashJavdekar @MIB_India @PIB_India @PIBFactCheck @DG_PIB pic.twitter.com/KxYJ3LFAKY
— PIB in Karnataka 🇮🇳 #StayHome #StaySafe (@PIBBengaluru) April 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.