ನವದೆಹಲಿ: ಒಂದು ಕಾಲದಲ್ಲಿ ಜನರಿಗೆ ಮನೋರಂಜನೆ ನೀಡುವ ಏಕೈಕ ಟಿವಿ ಚಾನೆಲ್ ಆಗಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತೆ ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದಷ್ಟೇ ಕೆಲವು ವರ್ಷಗಳ ಹಿಂದೆ ಡಿಡಿ ಪ್ರಸಾರ ಮಾಡುತ್ತಿದ್ದ ರಾಮಾಯಣ ಧಾರಾವಾಹಿಯನ್ನು ಮತ್ತೆ ಪ್ರಸಾರ ಮಾಡುವ ಮೂಲಕ ವೀಕ್ಷಕರನ್ನು ತನ್ನತ್ತ ಮತ್ತೆ ಸೆಳೆದುಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಆನಂತರದಲ್ಲಿ ಇದೀಗ ಹೊಸ ಯೋಜನೆಯೊಂದನ್ನು ರೂಪಿಸಿಕೊಂಡಿರುವ ದೂರದರ್ಶನ, ಡಿಡಿ ರೆಟ್ರೋ ಎಂಬ ಹೊಸ ಚಾನೆಲ್ ಒಂದನ್ನು ಆರಂಭ ಮಾಡಲು ಮುಂದಾಗಿದೆ.
ರಾಮಾಯಣ ಮತ್ತು ಮಹಾಭಾರತ ಎಂಬ ತನ್ನ ಹಳೆಯ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡುವ ಮೂಲಕ ಅದೆಷ್ಟೋ ಮಿಲಿಯನ್ ಜನ ವೀಕ್ಷಕರ ಗಮನ ಸೆಳೆದಿದೆ ಡಿಡಿ. ಇದೀಗ ತನ್ನ ಕ್ಲಾಸಿಕ್ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವ ಸಲುವಾಗಿ ಡಿಡಿ ರೆಟ್ರೋ ಆರಂಭ ಮಾಡುವುದಾಗಿಯೂ ಡಿಡಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿಯೂ ಮಾಹಿತಿ ನೀಡಿದೆ. ಡಿಡಿ ಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ ಹಳೆಯ ಧಾರಾವಾಹಿಗಳನ್ನು ಮತ್ತೆ ಕಣ್ತುಂಬಿಕೊಳ್ಳಲು ಡಿಡಿ ರೆಟ್ರೋ ನೋಡಿ ಎಂದು ಟ್ವೀಟ್ ಮಾಡಿದೆ.
If you have missed the opportunity to watch Mahabharat, watch it on DD Retro at 8 PM from Monday to Friday. pic.twitter.com/ImXTkkZ3oH
— DD RETRO (@RetroDD) April 12, 2020
ಕಳೆದ ವಾರ ರಾಮಾಯಣ ಧಾರಾವಾಹಿಯ ಮರು ಪ್ರಸಾರದ ನಂತರ ದೂರದರ್ಶನ ವೀಕ್ಷಕರ ಸಂಖ್ಯೆ 60% ದಷ್ಟು ಹೆಚ್ಚಿದೆ. ವೀಕ್ಷಕರ ಪಟ್ಟಿಯಲ್ಲಿ ಡಿಡಿ ಆಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು, ಆ ಮೂಲಕ ಇತರ ಹಿಂದಿ ವಾಹಿನಿಗಳನ್ನು ಹಿಂದಿಕ್ಕಿದೆ. ಅಲ್ಲದೆ ಡಿಡಿ ವಾಹಿನಿಯನ್ನು ಎಲ್ಲಾ ಕೇಬಲ್ ನೆಟ್ವರ್ಕ್ಗಳಲ್ಲಿಯೂ ಪ್ರಸಾರ ಮಾಡುವಂತೆ ಸರ್ಕಾರ ಈ ಹಿಂದೆಯೇ ಆದೇಶಿಸಿದ್ದು, ಇದೀಗ ಅದೇ ಆದೇಶದನ್ವಯ ಡಿಡಿ ರೆಟ್ರೋವನ್ನು ಪ್ರಸಾರ ಮಾಡಲಾಗುವುದಾಗಿ ಹೇಳಲಾಗುತ್ತಿದೆ.
ಒಟ್ಟಾರೆಯಾಗಿ ಹಳೆಯ ಜನಮನ ಗೆದ್ದ ಧಾರಾವಾಹಿಗಳ ಮೂಲಕ ದೂರದರ್ಶನ ಮತ್ತೆ ಜನಮಾನಸದಲ್ಲಿ ಸ್ಥಾನ ಪಡೆಯುತ್ತಿದೆ ಎನ್ನುವುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.