ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ಧನ್ಯವಾದ ತಿಳಿಸಿದ್ದಾರೆ.
ಆರೋಗ್ಯ ರಕ್ಷಣೆಗಾಗಿ ಕೊರೋನಾ ವಿರುದ್ಧ ಯೋಧರಂತೆ ಹಗಲಿರುಳು ದುಡಿಯುತ್ತಿರುವ ಜನರಿಗೆ ಧನ್ಯವಾದ ಸಂದೇಶ ನೀಡುವಂತೆ ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ ಬೆನ್ನಲ್ಲೇ, ನಡ್ಡಾ ಅವರು ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಹೋರಾಟಗಾರರಿಗೆ ಧನ್ಯವಾದ ಸಂದೇಶವನ್ನು ಬರೆದಿದ್ದಾರೆ. ಜೊತೆಗೆ ಜನ ಸಾಮಾನ್ಯರೂ ಧನ್ಯವಾದ ಸಮರ್ಪಿಸುವಂತೆ ತಿಳಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ, ದೇಶ ಇಂದು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಂದಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವವರನ್ನು ಗೌರವಿಸುವುದು ಕರ್ತವ್ಯ. ಅವರ ಧೈರ್ಯ ಮತ್ತು ಸೇವಾ ಮನೋಭಾವವೇ ಭಾರತವನ್ನು ಕಠಿಣ ಸ್ಥಿತಿಯಿಂದ ಕಾಪಾಡುತ್ತಿದೆ. ನಿಮ್ಮ ನಿಸ್ವಾರ್ಥ ಸೇವೆಯಿಂದಲೇ ಕರೋನಾದಿಂದ ಭಾರತವನ್ನು ಹಿಮ್ಮೆಟ್ಟಿಸಲು ಸಹಕಾರಿಯಾಗುವುದು. ನಿಮ್ಮ ಸೇವಾ ಧರ್ಮದ ಕಾರಣದಿಂದ ಇಂದು ದೇಶದ ಜನತೆ ಕೊಂಚ ಮಟ್ಟಿಗೆ ನೆಮ್ಮದಿಯಿಂದಿರುವುದು ಎಂದೂ ಅವರು ಬರೆದುಕೊಂಡಿದ್ದಾರೆ.
ನಿಮ್ಮ ಸ್ವಾರ್ಥ ರಹಿತ ಸೇವೆಗೆ ನಮ್ಮ ಹೃದಯಾಂತರಾಳದ ಧನ್ಯವಾದಗಳು. ಈ ಸಂದರ್ಭದಲ್ಲಿ ನೀವು ಮಾಡುತ್ತಿರುವ ಉತ್ತಮ ಕೆಲಸಗಳು ಇತರರಿಗೂ ಸ್ಫೂರ್ತಿದಾಯಕವೇ ಹೌದು ಎಂದು ನಡ್ಡಾ ಅವರು ತಿಳಿಸಿದ್ದು, ಆ ಮೂಲಕ ಅವರ ಸೇವೆಗೆ ಧನ್ಯವಾದ ಸಮರ್ಪಿಸಿದ್ದಾರೆ.
माननीय प्रधानमंत्री श्री @narendramodi जी के आह्वान ने पूरे देश को कोरोना के खिलाफ लड़ाई में एकजुट कर दिया है। ऐसे समय में कोरोना वॉरियर्स का अदम्य साहस और निःस्वार्थ सेवाभाव प्रेरणादायक है। आइए हम सब मिलकर उनका अभिनंदन करें।#ThankYouCoronaWarriors https://t.co/YpKTI24QqH
— Jagat Prakash Nadda (@JPNadda) April 8, 2020
Responding to Prime Minister Shri Narendra Modi’s call, the country has united in tackling COVID-19. In this valiant battle for humanity’s future, Corona Warriors are at the forefront. I salute their grit and determination. Join. #ThankYouCoronaWarriors https://t.co/zXKn7kbloL
— Jagat Prakash Nadda (@JPNadda) April 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.