ಕಾಶ್ಮೀರ: ಕೊರೋನಾ ಕೈಯಲ್ಲಿ ದೇಶವೇ ಹದೆಗೆಟ್ಟಿರುವಾಗ ಮೋದಿ ವಿರೋಧಿಗಳು ಮಾತ್ರ ಮೋದಿಯ ನಡೆಗಳನ್ನು ದೂಷಿಸುವುದು, ತಂದ ಕಾನೂನುಗಳನ್ನು ಉಲ್ಲಂಘನೆ ಮಾಡುವುದರ ಮೂಲಕ ಏನಾಗುತ್ತದೆ ನೋಡೋಣ ಎನ್ನುವ ಮನಸ್ಥಿತಿಯನ್ನು ಪ್ರದರ್ಶಿಸುತ್ತಿರುವುದು ಸರ್ವೇ ಸಾಮಾನ್ಯ. ಆದರೆ ಮೋದಿ ವಿರುದ್ಧದ ವಿರೋಧಗಳನ್ನೆಲ್ಲಾ ಬದಿಗಿಟ್ಟು, ದೇಶದ ಹಿತಕ್ಕಾಗಿ, ಕೊರೋನಾ ವಿರುದ್ಧ ಮೋದಿ ತಂದ ನಿಯಮಗಳನ್ನು ಪಾಲನೆ ಮಾಡುವಂತೆ ಕಾಶ್ಮೀರದ ಜನತೆಗೆ ಅಲ್ಲಿನ ಹುಡುಗಿಯೊಬ್ಬಳು ಮನವಿ ಮಾಡಿದ್ದಾಳೆ. ಎಲ್ಲರೂ ಒಗ್ಗಟ್ಟಾಗಿ ದೇಶದ ಈ ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆಯೂ ಆಕೆ ಹೇಳಿರುವ ವಿಡಿಯೋವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅಂದ ಹಾಗೆ ಈ ಹುಡುಗಿಯ ಹೆಸರು ರಿಫಾತ್. ಕಣಿವೆ ರಾಜ್ಯದ ಬಾರಾಮುಲ್ಲಾದ ಈಕೆ ಹತ್ತನೇ ತರಗತಿ ವಿದ್ಯಾರ್ಥಿನಿ. ರಾಷ್ಟ್ರದ ಹಿತಕ್ಕಾಗಿ ಮೋದಿ ತಿಳಿಸಿದ ಎಲ್ಲಾ ನಿಯಮಗಳನ್ನೂ ಅನುಸರಿಸಿ, ವೀರೋಧಗಳನ್ನೆಲ್ಲಾ ಪಕ್ಕಕ್ಕಿಟ್ಟು ಕೋವಿಡ್-19 ನಿಂದ ದೇಶವನ್ನು ರಕ್ಷಿಸಿಕೊಳ್ಳುವುದಕ್ಕೆ ಕೈ ಜೋಡಿಸುವಂತೆ ತಿಳಿಸಿದ್ದಾಳೆ. ಅಲ್ಲದೆ ಜಾತಿ ಧರ್ಮದ ಹಂಗನ್ನು ಮೀರಿ ದೇಶವನ್ನು ಉಳಿಸಲು ಜಕಾತ್ ಅಂದರೆ ದೇಣಿಗೆ ನೀಡುವಂತೆಯೂ ಈಕೆ ಮನವಿ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಬಡವರಿಗೆ ಸಹಾಯ ನೀಡುವಂತೆಯೂ ತಿಳಿಸಿರುವ ಆಕೆ, ಎಲ್ಲರೂ ಒಗ್ಗಟ್ಟಾಗಿ ಈ ಯುದ್ಧವನ್ನು ಗೆಲ್ಲೋಣ ಎಂಬ ಸಂದೇಶ ನೀಡಿದ್ದಾಳೆ.
ಅಲ್ಲದೆ ಸೋಂಕು ಹರಡದಂತೆ ತಪ್ಪಿಸಲು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾಳೆ. ಆ ಮೂಲಕ ಮೋದಿ ಜೊತೆಗೆ ಹೆಜ್ಜೆ ಹಾಕುವಂತೆ ತಿಳಿಸಿ ಇದೀಗ ಮನೆ ಮಾತಾಗಿದ್ದಾಳೆ.
ಇನ್ನು ಕಣಿವೆ ರಾಜ್ಯದಲ್ಲಿ ಈ ವರೆಗೆ 109 ರಷ್ಟು ಸೋಂಕಿತರು ಪತ್ತೆಯಾಗಿದ್ದು, 4 ಜನರು ಗುಣಮುಖರಾಗಿದ್ದರೆ, 2 ಮಂದಿ ಮೃತ ಪಟ್ಟ ಬಗ್ಗೆ ವರದಿಯಾಗಿದೆ.
#Baramulla, #Kashmir valley से Rifat/रिफत दसवीं क्लास छात्रा! Appeals to all, across community lines, to heed PM Sh @narendramodi ‘s advice. pic.twitter.com/dKRwcQZFxk
— Dr Jitendra Singh (@DrJitendraSingh) April 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.