ಮುಂಬಯಿ: ಲಾಕ್ಡೌನ್ ಕಾರಣದಿಂದಾಗಿ ಪರಿತಪಿಸುತ್ತಿರುವ ಬಡವರ ಮತ್ತು ನಿರ್ಗತಿಕರ ಸಹಾಯಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಗಮಿಸಿದೆ. ತನ್ನ ಸೇವಾ ಮತ್ತು ಪರಿಸರ ಅಂಗಸಂಸ್ಥೆ ಜನಕಲ್ಯಾಣ ಸಮಿತಿ ಮತ್ತು ಕೇಶವ ಸೃಷ್ಟಿ ಮೈ ಗ್ರೀನ್ ಸೊಸೈಟಿ ವತಿಯಿಂದ ಸಂಘವು ಒಂದು ಲಕ್ಷ ಜನರಿಗೆ ಮುಂಬೈಯಲ್ಲಿ ಆಹಾರವನ್ನು ಪೂರೈಸುವ ಕಾರ್ಯವನ್ನು ನಡೆಸುತ್ತಿದೆ.
ಕಳೆದ ಒಂದು ವಾರದಲ್ಲಿ ಪ್ರತಿನಿತ್ಯ ಒಂದು ಲಕ್ಷ ಜನರಿಗೆ ಆಹಾರವನ್ನು ಪೂರೈಸಲಾಗುತ್ತಿದೆ. ‘ಅನ್ನಪೂರ್ಣ ಯೋಜನೆ’ ಯೋಜನೆಯನ್ನು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನ 24 ವಾರ್ಡುಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇಲ್ಲಿ ಸುಮಾರು 1.2 ಲಕ್ಷ ಜನರಿಗೆ ದಿನಕ್ಕೆ ಎರಡು ಬಾರಿ ಬಿಸಿ ಊಟವನ್ನು ಪೂರೈಸಲಾಗುತ್ತದೆ. ಇದಕ್ಕಾಗಿ 17 ಕಮ್ಯೂನಿಟಿ ಕಿಚನ್ ಸ್ಥಾಪನೆ ಮಾಡಲಾಗಿದೆ.
ವಿವಿಧ ಮಾಧ್ಯಮಗಳ ಮೂಲಕ ಇಲ್ಲಿ ತಯಾರಿಸಿದ ಆಹಾರವನ್ನು ಜನರಿಗೆ ಪೂರೈಕೆ ಮಾಡಲಾಗುತ್ತಿದೆ.
ಈ ಕಿಚನ್ಗಳಿಂದ ಮುನ್ಸಿಪಲ್ ಕಾರ್ಪೋರೇಷನ್ 40,000 ಪೊಟ್ಟಣಗಳನ್ನು ಸ್ವೀಕರಿಸುತ್ತದೆ, ಇದನ್ನು ತನ್ನ ಸಿಬ್ಬಂದಿಗಳಿಗೆ ಮತ್ತು ಆಹಾರ ಕಾರ್ಯಕರ್ತರಿಗೆ ಮತ್ತು ಪೊಲೀಸರಿಗೆ ಒದಗಿಸುತ್ತದೆ. ವಸತಿರಹಿತರಿಗೆ, ಕಾರ್ಮಿಕರಿಗೆ ಮತ್ತು ಇತರ ವಲಸಿಗರಿಗೂ ಪೂರೈಸುತ್ತದೆ.
ಉಳಿದ 60,000 ಆಹಾರ ಪೊಟ್ಟಣಗಳನ್ನು ಆರೆಸ್ಸೆಸ್ ನೆಟ್ವರ್ಕ್ ಎನ್ಜಿಒಗಳ ಮೂಲಕ, ಸಮುದಾಯ ಸಂಸ್ಥೆಗಳ ಮೂಲಕ ದುರ್ಬಲ ವರ್ಗದವರ ಪ್ರದೇಶಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. ದಿನಗೂಲಿ ಕಾರ್ಮಿಕರಿಗೆ ಸುಮಾರು 20,000 ಪೊಟ್ಟಣಗಳನ್ನು ಪೂರೈಸಲಾಗುತ್ತದೆ.
“ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಸ್ವಯಂಸೇವಕರು ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳನ್ನು ಭೇಟಿಯಾಗಿ ಅವರ ಅಗತ್ಯಗಳ ಬಗ್ಗೆ ತಿಳಿದುಕೊಂಡರು. ತಮ್ಮ ಸಿಬ್ಬಂದಿಗಳಿಗೆ ಆಹಾರವನ್ನು ಪೂರೈಸುವುದು ಅತಿದೊಡ್ಡ ಹೊರೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ ಹಿನ್ನಲೆಯಲ್ಲಿ ಕಮ್ಯೂನಿಟಿ ಕಿಚನ್ಗಳನ್ನು ಸ್ಥಾಪಿಸುವ ನಿರ್ಧಾರವನ್ನು ಮಾಡಲಾಯಿತು. ಇಲ್ಲಿ ನಾವು ಕಾರ್ಮಿಕರಿಗೆ ಮತ್ತು ಸ್ಲಂ ನಿವಾಸಿಗಳಿಗೆ ಆಹಾರ ತಯಾರಿಸಲು ಆರಂಭಿಸಿದೆವು. ಗಂಟೆಯೊಳಗೆ, ಮೂರು ಕಮ್ಯುನಿಟಿ ಕಿಚನ್ಗಳು ಕಾರ್ಯಾರಂಭ ಮಾಡಿದವು” ಎಂದು ಕೇಶವ್ ಸೃಷ್ಟಿ ಮೈ ಗ್ರೀನ್ ಸೊಸೈಟಿ ಸದಸ್ಯ ವಿಶಾಲ್ ತಿಬ್ರೆವಲ್ ಹೇಳುತ್ತಾರೆ.
ಈ ಕಮ್ಯೂನಿಟಿ ಕಿಚನ್ ಕಾರ್ಯನಿರ್ವಹಣೆಯಲ್ಲಿ ಮತ್ತು ಆಹಾರಗಳನ್ನು ಪೂರೈಕೆ ಮಾಡುವಲ್ಲಿ ಸುಮಾರು 8,000 ಆರೆಸ್ಸೆಸ್ ಸ್ವಯಂಸೇವಕರು ಕಾರ್ಯನಿರತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.