ನಾಸಿಕ್ : ಒಂದಿಷ್ಟು ಕರೆನ್ಸಿ ನೋಟುಗಳಿಗೆ ಎಂಜಲನ್ನು ಮುಟ್ಟಿಸಿ, ಅವುಗಳಿಂದ ಮೂಗನ್ನು ಒರೆಸಿ ವಿಕೃತವಾಗಿ ನಡೆದುಕೊಂಡ ಮುಸ್ಲಿಮ್ ವ್ಯಕ್ತಿಯನ್ನು ನಾಸಿಕ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ನೋಟುಗಳಿಗೆ ಎಂಜಲು ಮುಟ್ಟಿಸಿ ಗಲೀಜು ಮಾಡುವ ವಿಡಿಯೋ ಮಾಡಿದ್ದ ಈತ, ಕರುಣಾ ಅಲ್ಲಾಹುವಿನ ಶಾಪ ಎಂದಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು, ವ್ಯಕ್ತಿಯನ್ನು ಭಾರತೀಯ ದಂಡ ಸಂಹಿತೆಯ 153, 188 ಸೆಕ್ಷನ್ ಅಡಿಯಲ್ಲಿ ಬಂಧಿಸಿದ್ದಾರೆ.
ವ್ಯಕ್ತಿಯನ್ನು ಗುರುತಿಸಲಾಗಿದೆ ಮತ್ತು ಆತನನ್ನು ಬಂಧನದಲ್ಲಿ ಇಡಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಒಂದಿಷ್ಟು ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಈ ವ್ಯಕ್ತಿ, ಅವುಗಳನ್ನು ನಾಲಿಗೆಯಿಂದ ನೆಕ್ಕಿದ್ದಾನೆ. ಮಾತ್ರವಲ್ಲ ಅವುಗಳಿಂದ ಮೂಗನ್ನು ಒರೆಸಿದ್ದಾನೆ. ತೀರಾ ಅನಾಗರಿಕನಂತೆ ವರ್ತಿಸಿದ್ದಾನೆ.
ಗುರುವಾರ ಈತನನ್ನು ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದು, ಮಾಲೆಗಾವ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
Lawful action has been taken against the accuse by Nashik Rural Police (Maharashtra) & he is in Police Custody.@invinciblearti@THEFACTGLOBAL#coronavirus https://t.co/Q6Zzga0HVo
— NASHIK RURAL POLICE (@SPNashikRural) April 2, 2020
Muslim man wipes his nose and mucous on currency notes to spread #coronavirus pandemic. He claims there is no cure for #COVID19 because it is disease sent by Allah to destroy infidels.
pic.twitter.com/g0TRlOgkIf— Tarek Fatah (@TarekFatah) April 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.