ಜಮ್ಮು-ಕಾಶ್ಮೀರ : ಪಾಕಿಸ್ಥಾನ ತನ್ನ ಪಂಜಾಬ್ ಪ್ರಾಂತದ ಕೊರೋನಾ ವೈರಸ್ ಸೋಂಕಿತ ರೋಗಿಗಳನ್ನು ಬಲವಂತವಾಗಿ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಗಿಲ್ಗಿಟ್ ಬಾಲ್ಟಿಸ್ಥಾನದ ಪ್ರದೇಶಗಳಿಗೆ ಕಳುಹಿಸುತ್ತಿದೆ ಎಂದು ವರದಿಯಾಗಿದೆ. ಜಗತ್ತಿನ ಎಲ್ಲ ದೇಶಗಳು ಈ ಮಹಾಮಾರಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪಾಕಿಸ್ಥಾನ ತನ್ನದೇ ದೇಶದ ನಾಗರೀಕರೊಂದಿಗೆ ಅಮಾನವೀಯವಾಗಿ ನಡೆಸುಕೊಂಡಿದೆ ಅಲ್ಲದೇ ತನ್ನದಲ್ಲದ ಆಕ್ರಮಿತ ಪ್ರದೇಶಕ್ಕೆ ಸೊಂಕಿತರನ್ನು ಸೈನ್ಯದ ಸಹಾಯದಿಂದ ಸಾಗಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ.
ಪಾಕಿಸ್ಥಾನದ ಈ ಕ್ರಮಕ್ಕೆ ಸ್ಥಳೀಯರು ಬಲವಾಗಿ ವಿರೋಧಿಸುತ್ತಿದ್ದು, ಆರೋಗ್ಯ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ಸೋಂಕಿತರನ್ನು ನೆಲೆಗೊಳಿಸುತ್ತಿರುವ ಪಾಕ್ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ. ರೋಗಿಗಳನ್ನು ಹೊರಗಿನಿಂದ ಕರೆತಂದು ಇಲ್ಲಿ ಇರಿಸಿದರೆ, ಇಡೀ ಪ್ರದೇಶವು ಸಾಂಕ್ರಾಮಿಕಕ್ಕೆ ಗುರಿಯಾಗಬಹುದು ಎಂಬುದು ಸ್ಥಳೀಯರ ಅಳಲಾಗಿದೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಸೇನಾ ಕೇಂದ್ರ ಕಚೇರಿಯ ಸುತ್ತಲೂ ಮತ್ತು ಸೇನಾ ಕುಟುಂಬಗಳು ಉಳಿದುಕೊಂಡಿರುವ ಪ್ರದೇಶಗಳಲ್ಲಿ ಯಾವುದೇ ಕೊರೋನಾ ಸೋಂಕಿತರು ಇರಬಾರದು ಎಂದು ಪಾಕಿಸ್ಥಾನದ ಸೇನಾಧಿಕಾರಿಗಳು ಆದೇಶಿಸಿದ್ದಾರೆ. ಈ ಆದೇಶದ ನಂತರ, ಪಾಕಿಸ್ಥಾನ ಸೇನೆಯು ಸೊಂಕಿತರನ್ನು ಮಿರ್ಪುರ್ ಸೇರಿದಂತೆ ಪಿಒಜೆಕೆ ಯ ಹಲವಾರು ಕಡೆಗಳಲ್ಲಿನ ಕ್ವಾರೆಂಟೈನ್ ಕೇಂದ್ರಗಳಿಗೆ ಬಲವಂತವಾಗಿ ಟ್ರಕ್ಗಳಲ್ಲಿ ಕಳುಹಿಸುತ್ತಿದೆ.
ಪಾಕಿಸ್ಥಾನ ಸರ್ಕಾರವು ಯಾವಾಗಲೂ ಪಿಒಜೆಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನದ ನಾಗರಿಕರನ್ನು ದ್ವಿತೀಯ ದರ್ಜೆ ನಾಗರೀಕರಂತೆ ನಡೆಸಿಕೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಷಯೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.