ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುವ ಕೊರೋನಾ ಯೋಧೆಯ ಸ್ಪೂರ್ತಿದಾಯಕ ವೀಡಿಯೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 40 ಸೆಕೆಂಡುಗಳ ವಿಡಿಯೋದಲ್ಲಿ ಬಾಲಕಿಯೊಬ್ಬಳು ತನ್ನ ತಂದೆಗೆ ಪತ್ರ ಬರೆಯುವುದನ್ನು ತೋರಿಸಲಾಗಿದೆ. ಇದರಲ್ಲಿ ಅವಳು ತನ್ನ ತಂದೆಗೆ ಪತ್ರ ಬರೆಯುವ ವಾಯ್ಸ್ಓವರ್ ನೀಡಲಾಗಿದೆ. ಅವಳು ಪತ್ರದಲ್ಲಿ ಬರೆಯುವ ಸಂಗತಿಯನ್ನು ವಿವರಿಸಲಾಗಿದೆ.
ಅವಳು ತನ್ನ ತಂದೆಗೆ ಪತ್ರ ಬರೆಯುತ್ತಾ, “ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ಈಗ ನೀವು ಎಲ್ಲಿದ್ದಿರೋ ಅಲ್ಲೇ ಇದ್ದು ಬಿಡಿ. ಮುಂಬೈಯಿಂದ ಹೊರಗೆ ಬರಬೇಡಿ. ಒಂದು ವೇಳೆ ನೀವು ಹೊರಗೆ ಬಂದರೆ ಕೊರೋನಾ ಗೆಲ್ಲುತ್ತದೆ ಮತ್ತು ನಮಗೆ ಕೊರೋನವನ್ನು ಸೋಲಿಸಲೇ ಬೇಕಿದೆ ಅಲ್ವೇ ಅಪ್ಪ? ” ಎಂದಿದ್ದಾಳೆ.
A young girl’s message to her father. Do watch. #IndiaFightsCorona pic.twitter.com/gF7ZVNzGVb
— Narendra Modi (@narendramodi) March 27, 2020
ಈ ವಿಡಿಯೋದಲ್ಲಿ, ” ನಿಮ್ಮ ಪೋಷಕರ ಮೇಲೆ ಗಮನ ವಹಿಸಿ. ಕೊರೋನಾ ಯೋಧರಾಗಿ” ಎಂದು ಸಂದೇಶವನ್ನು ನೀಡಲಾಗಿದೆ.
ಆನ್ಲೈನ್ನಲ್ಲಿ ಲಭ್ಯವಾದ ಕೇವಲ ಮೂರು ಗಂಟೆಗಳಲ್ಲಿ ವೀಡಿಯೊವನ್ನು ಎರಡು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇಲ್ಲಿಯವರೆಗೆ, ಇದು ಸುಮಾರು 52,900 ಲೈಕ್ಗಳನ್ನು ಮತ್ತು 10,000 ಕ್ಕೂ ಹೆಚ್ಚು ರಿಟ್ವೀಟ್ಗಳನ್ನು ಗಳಿಸಿದೆ.
ಜಾಗತಿಕ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುವ ಸಲುವಾಗಿ ಮುಂದನೆ 21 ದಿನಗಳ ಕಾಲ ಹೊರಗೆ ಹೆಜ್ಜೆ ಹಾಕದಂತೆ ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಮಾರ್ಚ್ 25ರಂದು ಕರೆ ನೀಡಿದ್ದಾರೆ. ಅಂದಿನಿಂದ ಭಾರತ ಸಂಪೂರ್ಣ ಲಾಕ್ ಡೌನ್ ಆಗಿದೆ.
ಇದುವರೆಗೆ ಭಾರತದಲ್ಲಿ 700 ಕ್ಕೂ ಹೆಚ್ಚು ಕೊರೋನವೈರಸ್ ಪ್ರಕರಣಗಳು ದಾಖಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಈವರೆಗೆ ಕೋವಿಡ್ -19 ಕಾರಣದಿಂದಾಗಿ 17 ಜನರು ಸಾವನ್ನಪ್ಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.