ನವದೆಹಲಿ: ಕೊರೋನವೈರಸ್ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಪರಸ್ಪರ ಸಂಯೋಜನೆಯೊಂದಿಗೆ ಹೋರಾಡುವ ಸಲುವಾಗಿ ಇಂದು ಜಿ20 ಎಮರ್ಜೆನ್ಸಿ ವರ್ಚುವಲ್ ಸಮಿಟ್ ನಡೆಯುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದಾರೆ.
ಸೌದಿಅರೇಬಿಯಾದ ರಾಜಕುಮಾರ ಸಲ್ಮಾನ್ ಇದರ ನೇತೃತ್ವ ವಹಿಸಲಿದ್ದಾರೆ.
“ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜಿ20 ಮಹತ್ವದ ಪಾತ್ರವನ್ನು ವಹಿಸಲಿದೆ. ಸೌದಿ ಅರೇಬಿಯದ ರಾಜಕುಮಾರ ಸಂಯೋಜಿಸುತ್ತಿರುವ ಜಿ20 ವರ್ಚುವಲ್ ಸಮಿಟ್ನಲ್ಲಿ ಅತ್ಯಂತ ಫಲದಾಯಕ ಚರ್ಚೆಯನ್ನು ನಾನು ಎದುರು ನೋಡುತ್ತಿದ್ದೇನೆ” ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
The #G20 has an important global role to play in addressing the COVID-19 pandemic. I look forward to productive discussions tomorrow at the #G20VirtualSummit, being coordinated by the Saudi G20 Presidency. @g20org @KingSalman
— Narendra Modi (@narendramodi) March 25, 2020
ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುವ ನಿಟ್ಟಿನಲ್ಲಿ ಇಂದಿನ ಸಮಿಟ್ನಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಜಿ20 ಮಾತ್ರವಲ್ಲದೇ, ಜೋರ್ಡಾನ್, ಸ್ಪೇನ್, ಸಿಂಗಾಪುರ ಮತ್ತು ಸ್ವಿಜರ್ಲ್ಯಾಂಡ್ ಮುಖಂಡರು ಕೂಡ ಈ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.