ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವುದರಿಂದ, ಅದರ ಹರಡುವಿಕೆಯನ್ನು ತಡೆಗಟ್ಟಲು ಭಾರತೀಯ ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸುವುದು, ಅನಿವಾರ್ಯವಲ್ಲದ ರೈಲುಗಳನ್ನು ರದ್ದುಗೊಳಿಸುವುದು ಮತ್ತು ಸೋಂಕನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತಿಳಿಸುವುದು ಈ ಕ್ರಮಗಳಲ್ಲಿ ಸೇರಿದೆ.
ಕೊರೋನವೈರಸ್ ಬಗ್ಗೆ ಭಾರತೀಯ ರೈಲ್ವೆ ಕೈಗೊಂಡ ಐದು ಕ್ರಮಗಳು ಇಲ್ಲಿವೆ:
🔹 ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಅನಗತ್ಯ ಪ್ರಯಾಣ ಮತ್ತು ರೈಲುಗಳ ದಟ್ಟಣೆಯನ್ನು ಕಡಿತಗೊಳಿಸುವ ಸಲುವಾಗಿ, ಇಲ್ಲಿಯವರೆಗೆ ಒಟ್ಟು 155 ಲೋ ಆಕ್ಯುಪೆನ್ಸೀ ರೈಲುಗಳನ್ನು (ಕಡಿಮೆ ಜನರು ಸಂಚರಿಸುತ್ತಿರುವ) ಮಾರ್ಚ್ 31 ರವರೆಗೆ ರದ್ದುಪಡಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ರೈಲುಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಂಡು ರೈಲುಗಳನ್ನು ರದ್ದುಪಡಿಸಲಾಗಿದೆ. ರದ್ದಾದ ರೈಲಿನ ಎಲ್ಲಾ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ನೀಡಲಾಗುತ್ತಿದೆ.
🔹 ಅನಗತ್ಯ ಪ್ರಯಾಣವನ್ನು ಕುಗ್ಗಿಸಲು ಮತ್ತು ಹಿರಿಯ ನಾಗರಿಕರ ಅನಗತ್ಯ ಪ್ರಯಾಣವನ್ನು ತಡೆಯಲು, ರೋಗಿಗಳು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರ ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ಟಿಕೆಟ್ಗಳ ರಿಯಾಯಿತಿ ಕಾಯ್ದಿರಿಸುವಿಕೆಯನ್ನು ಮಾರ್ಚ್ 20 ರಿಂದ ಅಮಾನತುಗೊಳಿಸಲಾಗುತ್ತಿದೆ.
🔹 COVID-19 ಹರಡಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಅನಗತ್ಯ ಜನಸಂದಣಿಯನ್ನು ತಪ್ಪಿಸಲು, ರೈಲ್ವೆ ನಿಲ್ದಾಣಗಳ ಪರಿಸ್ಥಿತಿಯನ್ನು ಪರಿಶೀಲಿಸಲು ಅಗತ್ಯವಿರುವ ಕಡೆಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ಗಳ ಬೆಲೆಯನ್ನು 50 ರೂ. ಗೆ ಹೆಚ್ಚಿಸಲು ಡಿಆರ್ಎಂಗಳಿಗೆ ಸೂಚಿಸಲಾಗಿದೆ.
🔹 ಪ್ರಯಾಣಿಕರ ಅನಿವಾರ್ಯವಲ್ಲದ ರೈಲು ಪ್ರಯಾಣವನ್ನು ಮಾಡದಿರಲು ಮತ್ತು ಪ್ರಯಾಣದ ವೇಳೆ ಅವರಿಗೆ ಜ್ವರ ಬರದಂತೆ ನೋಡಿಕೊಳ್ಳಲು ಸಲಹೆಗಳನ್ನು ನೀಡಲಾಗುತ್ತಿದೆ. ಪ್ರಯಾಣದ ಯಾವುದೇ ಹಂತದಲ್ಲಿ ಪ್ರಯಾಣಿಕರಿಗೆ ಜ್ವರವಿರುವುದು ಪತ್ತೆಯಾದರೆ, ಅವರು ವೈದ್ಯಕೀಯ ಚಿಕಿತ್ಸೆ ಮತ್ತು ಹೆಚ್ಚಿನ ಸಹಾಯಕ್ಕಾಗಿ ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಬಹುದು.
🔹 ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳ ಸಾರ್ವಜನಿಕ ವ್ಯವಸ್ಥೆಯಲ್ಲಿ ಕೊರೋನವೈರಸ್ ಬಗೆಗಿನ ನಿಯಮಿತವಾಗಿ ಪ್ರಕಟಣೆಗಳನ್ನು ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.