ನವದೆಹಲಿ: ಕೊರೋನಾವೈರಸ್ನ 13 ಹೊಸ ಪ್ರಕರಣಗಳು ಭಾರತದಲ್ಲಿ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 169 ಕ್ಕೆ ಏರಿಕೆಯಾಗಿದೆ. ಜಾಗತಿಕವಾಗಿ 8,978 ಜನರು ಸಾವನ್ನಪ್ಪಿದ್ದಾರೆ ಮತ್ತು 219,702 ಜನರಿಗೆ ಸೋಂಕು ತಗುಲಿದೆ.
ದೇಶ ಕೊರೋನಾವೈರಸ್ಗೆ ತತ್ತರಿಸಿರುವ ಸಂದರ್ಭದಲ್ಲಿ ಬಿಜೆಪಿ ನಾಯಕ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಉದಾತ್ತ ಕೊಡುಗೆಯೊಂದನ್ನು ಘೋಷಿಸಿದ್ದಾರೆ.
ಬಗ್ಗಾರ ಆನ್ಲೈನ್ ಶಾಪಿಂಗ್ ವೆಬ್ಸೈಟ್, ಟಿಶರ್ಟ್ಭೈಯಾ.ಕಾಂ, ಟಿ-ಶರ್ಟ್ಗಳಿಂದ ಹಿಡಿದು ಆಭರಣಗಳವರೆಗಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕ್ರಮವಾಗಿ ತಮ್ಮ ಆನ್ಲೈನ್ ಶಾಪಿಂಗ್ನಲ್ಲಿ ಅವರು ಪ್ರತಿ ಆರ್ಡರ್ನಲ್ಲೂ ಎರಡು ಮುಖಗವಸುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
“ನಾವು ಈಗಿನಿಂದ ಪ್ರತಿ ಆರ್ಡರ್ನಲ್ಲಿ 2 ಮುಖಗವಸುಗಳನ್ನು ಉಡುಗೊರೆಯಾಗಿ ನಮ್ಮ ಗ್ರಾಹಕರಿಗೆ ಕಳುಹಿಸುತ್ತಿದ್ದೇವೆ ಏಕೆಂದರೆ # WeCare4U” ಎಂದು ಅವರ ಇ-ಕಾಮರ್ಸ್ ವೆಬ್ಸೈಟ್ ಟ್ವೀಟ್ ಮಾಡಿದೆ.
COVID-19 ವಿರುದ್ಧ ಹೋರಾಡುವ ತನ್ನ ಉಪಕ್ರಮದ ಬಗ್ಗೆ ಮಾಹಿತಿ ನೀಡಿರುವ ಬಗ್ಗಾ, ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಮೈಂಟ್ರಾಗಳಂತಹ ಇತರ ಇ-ಕಾಮರ್ಸ್ ತಾಣಗಳು ಸಹ ಇದನ್ನು ಅನುಸರಿಸಬೇಕೆಂದು ಆಗ್ರಹಿಸಿದ್ದಾರೆ. ನಾವು ಈ ಉಪಕ್ರಮವನ್ನು ಕೋವಿಡ್ 19 ವಿರುದ್ಧ ಹೋರಾಡುವುದಕ್ಕಾಗಿ ಕೈಗೊಂಡಿದ್ದೇವೆ ಎಂದಿದ್ದಾರೆ.
We started this initiative to #FightCOVID19 . I also request @amazonIN @Flipkart @myntra & other E-Commerce websites to Join this initiative and send Free Masks with all Orders and Help India to fight against Chorona Virus #COVID2019india https://t.co/fFzc7Ouard
— Tajinder Pal Singh Bagga (@TajinderBagga) March 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.