ನವದೆಹಲಿ: ರೈಲು ಬೋಗಿಗಳ ಉತ್ಪಾದನೆಯಲ್ಲಿ ವಿಶ್ವಮಟ್ಟದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಗಮನವನ್ನು ನೆಟ್ಟಿದೆ. ರೈಲ್ವೆ ಸಚಿವ ಪಿಯೂಶ್ ಗೋಯಲ್ ನೇತೃತ್ವದ ಭಾರತೀಯ ರೈಲ್ವೆ ಭಾರತದ ಮೊದಲ ಅಲ್ಯೂಮಿನಿಯಂ ಬಾಡಿ ರೈಲು ಬೋಗಿಗಳನ್ನು ತಯಾರಿಸುವ ಪರಿಣತಿಯನ್ನು ಪಡೆದುಕೊಳ್ಳಲು ಸಜ್ಜಾಗುತ್ತಿದೆ. ರಾಯ್ ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿಯಲ್ಲಿ (ಎಂಸಿಎಫ್) 500 ಅಲ್ಯೂಮಿನಿಯಂ ಬಾಡಿ ಬೋಗಿಗಳನ್ನು ತಯಾರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ದಕ್ಷಿಣ ಕೊರಿಯಾದ ಸಂಸ್ಥೆ ಡಾವೊನ್ಸಿಸ್ನಿಂದ ಟ್ರಾನ್ಸ್ಫರ್ ಆಫ್ ಟೆಕ್ನಾಲಜಿ (ತಂತ್ರಜ್ಞಾನದ ವರ್ಗಾವಣೆ)ಯಾದ ನಂತರ 2021-2022ನೇ ಸಾಲಿನಲ್ಲಿ ಬೋಗಿಗಳನ್ನು ತಯಾರಿಸುವ ನಿರೀಕ್ಷೆಯಿದೆ ಮತ್ತು ಇದಕ್ಕಾಗಿ 128 ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ.
ಹೊಸ ಅಲ್ಯೂಮಿನಿಯಂ ಬಾಡಿ ಕೋಚ್ ಪ್ರಸ್ತುತ ಭಾರತೀಯ ರೈಲ್ವೆ ಕಾರ್ಖಾನೆಗಳು ತಯಾರಿಸುವ ಸ್ಟೇನ್ಲೆಸ್ ಸ್ಟೀಲ್ ರೋಲಿಂಗ್ ಸ್ಟಾಕ್ಗಿಂತ ಉತ್ತಮವಾಗಿರುತ್ತದೆ. ಎಕ್ಸ್ಟಿರೀಯರ್, ಇನ್ಟೀರಿಯರ್, ಆರಾಮದಾಯಕತೆ, ಸುರಕ್ಷತೆ ವಿಷಯದಲ್ಲಿ ಈ ಹೊಸ ಲೋಕೋಮೋಟಿವ್-ಹಾಲ್ಡ್ ಅಲ್ಯೂಮಿನಿಯಂ ಬಾಡಿ ಬೋಗಿಗಳು ಅಸ್ತಿತ್ವದಲ್ಲಿರುವ ರಾಜಧಾನಿ ಮತ್ತು ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳಿಗಿಂತ ಉತ್ತಮವಾಗಿರುತ್ತದೆ.
ಭಾರತೀಯ ರೈಲ್ವೆಗಾಗಿ ಬ್ರಾಡ್ ಗೇಜ್ ಲೊಕೊ-ಹೌಲ್ಡ್ ಮತ್ತು ಮೆಟ್ರೋ ನೆಟ್ವರ್ಕ್ಗಳಿಗೆ ಸ್ಟ್ಯಾಂಡರ್ಡ್ ಗೇಜ್ ಎಂಬ ಎರಡು ರೀತಿಯ ಬೋಗಿಗಳನ್ನು ತಯಾರಿಸಲಾಗುತ್ತಿದೆ. ಹೊಸ ಅಲ್ಯೂಮಿನಿಯಂ ಬಾಡಿ ಕೋಚ್ ಮೆಟ್ರೋ ಬೋಗಿಗಳು 100 ಕಿ.ಮೀ ವೇಗ ಮತ್ತು ಬ್ರಾಡ್ ಗೇಜ್ ಭಾರತೀಯ ರೈಲ್ವೆ ಕೋಚ್ ಗಳು 160 ಕಿ.ಮೀ ವೇಗವನ್ನು ಹೊಂದಿರುತ್ತದೆ. ಭಾರತೀಯ ರೈಲ್ವೆಗಾಗಿ, ದಕ್ಷಿಣ ಕೊರಿಯಾದ ಸಂಸ್ಥೆಯು ಒಂದು ಎಸಿ ಫಸ್ಟ್ ಕ್ಲಾಸ್ ಸ್ಲೀಪರ್ ಕೋಚ್, ಎರಡು ಎಸಿ -2 ಟಯರ್ ಸ್ಲೀಪರ್ ಬೋಗಿಗಳು, ಮೂರು ಎಸಿ -3 ಟಯರ್ ಸ್ಲೀಪರ್ ಬೋಗಿಗಳು, 1 ಎಸಿ ಹಾಟ್ ಬಫೆಟ್ ಕಾರು, ಡ್ರೈವರ್ / ಗಾರ್ಡ್ ಕ್ಯಾಬಿನ್ನೊಂದಿಗೆ 1 ಎಸಿ ಡಿಎಸ್ಎಲ್ಆರ್ ಅನ್ನು ತಯಾರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.