ಲಕ್ನೋ: ಉತ್ತರಪ್ರದೇಶದಲ್ಲಿ ಫಿಲ್ಮ್ ಟೂರಿಸಂನನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಪ್ರಯತ್ನ ಪಡುತ್ತಿರುವ ಅಲ್ಲಿನ ಸರ್ಕಾರ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ಜಾನ್ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿದೆ.
ಈ ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ತೆರಿಗೆ ಮುಕ್ತಗೊಳಿಸುವಂತೆ ಮನವಿಯನ್ನೂ ಕೂಡ ಮಾಡಿದ್ದರು. ಜುಲೈ 17ರಂದು ಭಜರಂಗಿ ಭಾಯ್ಜಾನ್ ಸಿನಿಮಾ ರಿಲೀಸ್ ಆಗಿ ದೇಶದಾದ್ಯಂತ ಭರ್ಜರಿ ಪ್ರಚಾರ ಕಾಣುತ್ತಿದೆ.
ರಾಜ್ಯದಲ್ಲಿ ಫಿಲ್ಮ್ ಟೂರಿಸಂ ಅನ್ನು ಪ್ರಚಾರ ಮಾಡಲು ಯುಪಿ ಸರ್ಕಾರ ಉತ್ಸುಹುಕವಾಗಿದೆ, ಅದಕ್ಕಾಗಿ ನೂತನ ಫಿಲ್ಮ್ ಪಾಲಿಸಿಗಳನ್ನು ತರಲಾಗಿದ್ದು, ಇದು ಹಲವಾರು ಚಲನಚಿತ್ರ ತಯಾರಕರನ್ನು ಆಕರ್ಷಿತಗೊಳಿಸಿದೆ. ಹೀಗಾಗಿ ಉತ್ತರಪ್ರದೇಶದಲ್ಲಿ ಸಾಕಷ್ಟು ಚಲನಚಿತ್ರಗನ್ನು ಶೂಟ್ ಮಾಡಲಾಗುತ್ತಿದೆ.
ಅಲ್ಲದೇ ಸುಮಾರು 650 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತರಪ್ರದೇಶದಲ್ಲಿ ಫಿಲ್ಮ್ ಸಿಟಿಯನ್ನು ನಿರ್ಮಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ, ಇದರಿಂದ 9 ಸಾವಿರ ಮಂದಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ಮುಂಬಯಿ ಮೂಲದ ಪರ್ಪಲ್ ಸಿಸ್ ಫಿಲ್ಮ್ ಸಿಟಿ ಇದಕ್ಕೆ ಹೂಡಿಕೆ ಮಾಡಲು ಮುಂದಾಗಿದೆ.
ಉತ್ತರಪ್ರದೇಶದಲ್ಲಿ ಸಿನಿಮಾದ ಶೇ.50ರಷ್ಟು ಭಾಗವನ್ನು ಶೂಟಿಂಗ್ ಮಾಡಿದರೆ ಅಲ್ಲಿನ ಸರ್ಕಾರ ಆ ಚಿತ್ರಕ್ಕೆ ಎರಡು ಕೋಟಿ ನಗದು ಅನುದಾನವನ್ನು ನೀಡುವ ಹೊಸ ಪಾಲಿಸಿಯನ್ನು ಜಾರಿಗೆ ತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.