ನವದೆಹಲಿ: ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವ ಮೂಲಕ ಮೋದಿ ಸರ್ಕಾರ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ತುಟ್ಟಿಭತ್ಯೆಯನ್ನು ಶೇ.4ರಷ್ಟು ಏರಿಸುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಪ್ರಕಾರ ಈ ಬಾರಿ ನೌಕರರ ವೇತನ ಪರಿಷ್ಕರಣೆ ಅಥವ ಹೆಚ್ಚಳದ ಕುರಿತಾದಂತೆ ಯಾವುದೇ ಮಾಹಿತಿ ಇಲ್ಲ. ಆದರೆ ತುಟ್ಟಿಭತ್ಯೆಯನ್ನು ಏರಿಕೆ ಮಾಡುವ ವಿಚಾರಕ್ಕೆ ಮೋದಿ ಸರ್ಕಾರ ಅಸ್ತು ಎಂದಿದ್ದು, ಪ್ರತಿ ತಿಂಗಳಿಗೆ ಕನಿಷ್ಟ ವೇತನ 18,000 ರೂ.ಗಳನ್ನು ನೌಕರರು ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕರಿ ನೌಕರರು ಇನ್ನು ಮುಂದೆ 9 ಗಂಟೆಗಳಷ್ಟು ಕಾಲ ಕಾರ್ಯ ನಿರ್ವಹಿಸಬೇಕಾಗಿದ್ದು, ಅವರಿಗೆ ಸಾರಿಗೆ ಭತ್ಯೆಯನ್ನೂ ನೀಡಲಾಗುತ್ತದೆ. ಆದರೆ ಗೃಹ ಭತ್ಯೆಯನ್ನು ನೀಡುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಗಿಲ್ಲ. ಪ್ರಸ್ತುತ ಶೇ.17ರಷ್ಟು ಸಿಗುತ್ತಿರುವ ತುಟ್ಟಿ ಭತ್ಯೆ ಮುಂದಿನ ದಿನಗಳಲ್ಲಿ ಶೇ. 21 ಕ್ಕೆ ಏರಿಕೆಯಾಗಲಿದೆ. ಈ ಬದಲಾವಣೆಯಿಂದಾಗಿ ಪಿಂಚಣಿದಾರರಿಗೂ ಅನುಕೂಲವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.