ನವದೆಹಲಿ: ಕೊರೋನವೈರಸ್ ಪೀಡಿತ ದೇಶಗಳಾದ ಇಟಲಿ ಮತ್ತು ಇರಾನ್ಗಳಲ್ಲಿ ಸಿಲುಕಿರುವ ಭಾರತೀಯರನ್ನು ತಪಾಸಣೆ ಮಾಡಿದ ನಂತರ ಅವರನ್ನು ಮರಳಿ ಭಾರತಕ್ಕೆ ಕರೆತರುವತ್ತ ಸರ್ಕಾರ ಗಮನ ಹರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
COVID19 ಪೀಡಿತ ದೇಶಗಳಿಂದ ಇದುವರೆಗೆ 948 ಪ್ರಯಾಣಿಕರನ್ನು ಸರ್ಕಾರ ಸ್ಥಳಾಂತರಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ. ಈ ಪೈಕಿ 900 ಭಾರತೀಯ ನಾಗರಿಕರು ಮತ್ತು 48 ಮಂದಿ ಮಾಲ್ಡೀವ್ಸ್, ಮಯನ್ಮಾರ್, ಬಾಂಗ್ಲಾದೇಶ, ಚೀನಾ, ಯುಎಸ್ಎ, ಮಡಗಾಸ್ಕರ್, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರು ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸೇರಿದವರು ಎಂದಿದ್ದಾರೆ.
ಭಾರತೀಯರನ್ನು ಪರೀಕ್ಷಿಸಲು ವೈದ್ಯಕೀಯ ತಂಡ ಗುರುವಾರ ಇಟಲಿಗೆ ತೆರಳಲಿದೆ ಎಂದು ಅವರು ಮಾಹಿತಿ ನೀಡಿದ ಅವರು, “ಕೊರೋನವೈರಸ್ ಕಾರಣದಿಂದಾಗಿ ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ತಪಾಸಣೆಗೊಳಪಡಿಸಲು ವೈದ್ಯಕೀಯ ತಂಡವನ್ನು ಕಳುಹಿಸಿಕೊಡಲಾಗಿದೆ” ಎಂದಿದ್ದಾರೆ.
ಇಟಲಿ ಮತ್ತು ಇರಾನ್ನ ಪರಿಸ್ಥಿತಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ ಮತ್ತು ಸೂಕ್ತ ಪರೀಕ್ಷೆ ಮತ್ತು ತಪಾಸಣೆಯ ನಂತರ ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದಿದ್ದಾರೆ.
ಇರಾನ್ನ ಹಲವಾರು ಪ್ರಾಂತ್ಯಗಳಲ್ಲಿ 6000 ಕ್ಕೂ ಹೆಚ್ಚು ಭಾರತೀಯರು ಸಿಕ್ಕಿಬಿದ್ದಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ ಅವರು, ಇದರಲ್ಲಿ ಮುಖ್ಯವಾಗಿ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಮಹಾರಾಷ್ಟ್ರದ ಸುಮಾರು 1,100 ಯಾತ್ರಾರ್ಥಿಗಳು ಸೇರಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.