ಮುಂಬೈ: ಖ್ಯಾತ ಮಾಡೆಲ್ ಮತ್ತು ನಟರಾಗಿರುವ ಮಿಲಿಂದ್ ಸೋಮನ್ ಅವರು ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ತಮ್ಮ ಒಡನಾಟವನ್ನು ‘ಮೇಡ್ ಇನ್ ಇಂಡಿಯಾ – ಮಿಲಿಂದ್ ಸೋಮನ್’ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
‘ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆಯುತ್ತಿದ್ದ ಆರ್ಎಸ್ಎಸ್ ಶಾಖೆಗಳಿಗೆ ತಾನು ತೆರಳುತ್ತಿದ್ದ ದಿನಗಳನ್ನು ಮಿಲಿಂದ್ ನೆನಪಿಸಿಕೊಂಡಿದ್ದಾರೆ. ಆರ್ಎಸ್ಎಸ್ ಶಾಖೆಗಳಿಗೆ ಸೇರುವುದರಿಂದ ಶಿಸ್ತು, ದೈಹಿಕ ಸದೃಢತೆ ಮತ್ತು ಉತ್ತಮ ಚಿಂತನೆಗಳು ಮೂಡುತ್ತದೆ ಎಂಬುದನ್ನು ನನ್ನ ತಂದೆಯ ಬಲವಾಗಿ ನಂಬಿದ್ದರು ಎಂದಿದ್ದಾರೆ.
ಆರ್ಎಸ್ಎಸ್ ಶಾಖೆಗಳ ಬಗ್ಗೆ ಮಾಧ್ಯಮಗಳು ಮಾಡುತ್ತಿರುವ ನಕಾರಾತ್ಮಕ ವರದಿಗಳನ್ನು ಅಲ್ಲಗಳೆದಿರುವ ಅವರು, ಆರ್ಎಸ್ಎಸ್ ಶಾಖೆಗಳಲ್ಲಿ ನನ್ನ ಅನುಭವ ಸಂಪೂರ್ಣವಾಗಿ ಭಿನ್ನವಾಗಿತ್ತು ಎಂದಿದ್ದಾರೆ.
“ಸಂಜೆ 6.00 ರಿಂದ 7.00 ವರೆಗಿನ ಆರ್ಎಸ್ಎಸ್ ಶಾಖೆಯಲ್ಲಿ ನನ್ನ ಅನುಭವ ನಿಜಕ್ಕೂ ಭಿನ್ನವಾಗಿತ್ತು. ಖಾಕಿ ಶಾಖಾ ವಸ್ತ್ರ ಧರಿಸಿ ನಾವು ಮೆರವಣಿಗೆ ಮಾಡುತ್ತಿದ್ದೆವು, ಯೋಗ ಮಾಡುತ್ತಿದ್ದೆವು, ಕೆಲವೊಂದು ವ್ಯಾಯಾಮಗಳನ್ನು ಮಾಡುತ್ತಿದ್ದೆವು, ಹಾಡುಗಳನ್ನು ಹಾಡುತ್ತಿದ್ದೆವು ಮತ್ತು ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದೆವು” ಎಂದಿದ್ದಾರೆ.
ಅವರು ಪುಸ್ತಕದಲ್ಲಿ ಬರೆದ ವಿಷಯಗಳನ್ನು ಮಾಧ್ಯಮವೊಂದು ವರದಿ ಮಾಡಿದ ಬಳಿಕ ಟ್ವಿಟರ್ನಲ್ಲಿ ಇದು ದೊಡ್ಡ ಟ್ರೆಂಡ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಹತ್ತರ ವಯಸ್ಸಿನಲ್ಲಿ ಪಡೆದ ಅನುಭವಕ್ಕಾಗಿ 54ನೇ ವಯಸ್ಸಿನಲ್ಲಿ ಟ್ರೆಂಡ್ ಆಗುತ್ತಿದ್ದೇನೆ. ಆ ವಯಸ್ಸಿನಲ್ಲಿ ಪಡೆದ ಈಜಿನ ಅಭ್ಯಾಸಕ್ಕಾಗಿ ಟ್ರೆಂಡ್ ಆಗುತ್ತಿದ್ದರೆ ಎಂದು ಆಶಿಸುವೆ” ಎಂದು ಹೇಳಿದ್ದಾರೆ.
Trending at 54 for an experience I had at the age of 10. 🤪🤪🤪🤪 wish it was about swimming, which was at the same time!
— Milind Usha Soman (@milindrunning) March 10, 2020
Sanghi Milind Soman 😍😍😍
Now waiting for Liberandus to dump him.😹 pic.twitter.com/ypZ7g9VYk6— Amit Kumar Sindhi 🇮🇳 (@AMIT_GUJJU) March 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.