ನವದೆಹಲಿ: ಈ ವರ್ಷದ ನಾರಿ ಶಕ್ತಿ ಪುರಾಸ್ಕರ್ಗೆ 106 ವರ್ಷದ ಭಾಗೀರಥಿ ಅಮ್ಮ ಮತ್ತು 98 ವರ್ಷದ ಕಾರ್ತ್ಯಾಯನಿ ಅಮ್ಮ ಆಯ್ಕೆಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 1999 ರಲ್ಲಿ ಸ್ಥಾಪಿಸಿದ ಈ ಪುರಸ್ಕಾರವು, ಮಹಿಳೆಯರ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸುವುದಕ್ಕಾಗಿ ನೀಡಲಾಗುವ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಆರು ಸಾಂಸ್ಥಿಕ ವಿಭಾಗಗಳಲ್ಲಿ ಮತ್ತು ಎರಡು ವೈಯಕ್ತಿಕ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಭಾಗೀರಥಿ ಅಮ್ಮ 2019 ರಲ್ಲಿ 4 ನೇ ತರಗತಿಯ ಪರೀಕ್ಷೆಯನ್ನು ಬರೆದು ಉತ್ತೀರ್ಣಗೊಂಡಿದ್ದರು. ಅವರ ಅದ್ಭುತ ಸಾಧನೆಗೆ ಅಪರೂಪದ ಗೌರವವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಫೆಬ್ರವರಿ 2020 ರ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿಶೇಷ ಉಲ್ಲೇಖವನ್ನು ಪಡೆದುಕೊಂಡಿದ್ದರು. ಭಾಗೀರಥಿ ಅವರಂತೆಯೇ ಇಳಿ ವಯಸ್ಸಿನಲ್ಲಿ ಓದುತ್ತಿರುವ ಕೇರಳದ ಆಲ್ಫುಝಾ ಜಿಲ್ಲೆಯಲ್ಲಿ ವಾಸಿಸುವ ಕಾರ್ತ್ಯಾಯನಿ ಅಮ್ಮ ಕೂಡ ಈ ವರ್ಷದ ನಾರಿ ಶಕ್ತಿ ಪುರಾಸ್ಕರ್ಗೆ ಪಾತ್ರರಾಗಿದ್ದಾರೆ. ಅಂತಿಮ ಪರೀಕ್ಷೆಯಲ್ಲಿ ಅವರು 100 ರಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.
ಕೇರಳದ ಇಬ್ಬರು ಮಹಿಳೆಯರನ್ನು ಕಾಮನ್ವೆಲ್ತ್ ಆಫ್ ಲರ್ನಿಂಗ್ ಗುಡ್ವಿಲ್ ರಾಯಭಾರಿಗಳಾಗಿ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.