ನವದೆಹಲಿ: ಕೊರೋನವೈರಸ್ನಿಂದಾಗಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಇದೀಗ ಟೊಕಿಯೋ ಒಲಿಂಪಿಕ್ಸ್ ಕೂಡ ಕೊರೋನವೈರಸ್ ಕಾರಣದಿಂದಾಗಿ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯು ಕೊರೋನವೈರಸ್ ಬೆದರಿಕೆಯ ಹಿನ್ನಲೆಯಲ್ಲಿ ವರ್ಷದ ಅಂತ್ಯದವರೆಗೆ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡುವ ಅವಕಾಶ ನೀಡಲಿದೆ ಎಂದು ಜಪಾನ್ ಒಲಿಂಪಿಕ್ಸ್ ಸಚಿವ ಸೀಕೊ ಹಶಿಮೊಟೊ ಮಂಗಳವಾರ ತಮ್ಮ ದೇಶದ ಸಂಸತ್ತಿನಲ್ಲಿ ಹೇಳಿದ್ದಾರೆ.
3,100 ಕ್ಕೂ ಹೆಚ್ಚು ಜನರನ್ನು ಕೊರೋನವೈರಸ್ ಕೊಂದಿದೆ ಮತ್ತು ಇದು 75 ದೇಶಗಳಿಗೆ ಹರಡಿದೆ.
ಈ ಬೇಸಿಗೆಯಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ಗೆ ಕರೋನವೈರಸ್ನ ಬೆದರಿಕೆಯ ಕುರಿತು ಚರ್ಚಿಸಲು ಐಒಸಿ ಮಂಗಳವಾರ ಒಂದು ನಿರ್ಣಾಯಕ ಕಾರ್ಯನಿರ್ವಾಹಕ ಮಂಡಳಿಯ ಸಭೆಯನ್ನು ನಡೆಸಿತ್ತು. ಇದರಲ್ಲಿ ಒಲಿಂಪಿಕ್ಸ್ ಮುಂದೂಡುವ ಆಯ್ಕೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಟೊಕಿಯೋ 2020 ಒಲಿಂಪಿಕ್ಸ್ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಯಲಿದೆ. ಜಪಾನ್ ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯೋಜನೆಯಂತೆಯೇ ಎಲ್ಲವೂ ನಡೆಯಲಿದೆ ಎಂದು ಜಪಾನ್ ಹೇಳಿದೆ.
ಒಂದು ವೇಳೆ ಕೊರೋನವೈರಸ್ ಭೀತಿ ಮತ್ತಷ್ಟು ಉಲ್ಬಣಗೊಂಡಲ್ಲಿ ಒಲಿಂಪಿಕ್ಸ್ ಅನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.