ನವದೆಹಲಿ: ದೇಶದ ಮೊದಲ ಮಹಿಳಾ ವೈದ್ಯೆ, ಭಾರತದ ಹವಾಮಾನ ಮೌಲ್ಯಮಾಪನ ವ್ಯವಸ್ಥೆಗಳ ಪ್ರವರ್ತಕಿ, ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಮಹಿಳೆ… ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಾಧಕಿಯರ ಸಾಧನೆಗಳ ಬಗ್ಗೆ ನಮಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಜರಗುತ್ತವೆ. ಈ ಬಾರಿಯೂ ಭಾರತದ ಕೆಲವು ಅಪ್ರತಿಮ, ಆದರೆ ಮರೆತು ಹೋದ ಮಹಿಳಾ ವಿಜ್ಞಾನಿಗಳನ್ನು ಇತಿಹಾಸದ ಅಸ್ಪಷ್ಟ ದಾಖಲೆಗಳಿಂದ ಮುನ್ನಲೆಗೆ ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳು 20ನೇ ಶತಮಾನದ 11 ಮಹಿಳಾ ವಿಜ್ಞಾನಿಗಳನ್ನು ಗುರುತಿಸಿದ್ದು, ಅವರ ಹೆಸರಲ್ಲಿ ದೇಶದಾದ್ಯಂತ ವಿಜ್ಞಾನ ಪೀಠಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಸೈಟೊಜೆನೆಟಿಕ್ಸ್ನಿಂದ ಸಾವಯವ ರಸಾಯನಶಾಸ್ತ್ರದಿಂದ ಸಾಮಾಜಿಕ ವಿಜ್ಞಾನದವರೆಗೆ ಪೀಠಗಳ ಸ್ಥಾಪನೆಯಾಗಲಿದೆ. ಮಹಿಳಾ ಸಂಶೋಧಕರು ಮಾತ್ರ ಇಲ್ಲಿ ಅವಕಾಶಗಳನ್ನು ಪಡೆಯಲಿದ್ದಾರೆ ಮತ್ತು 1 ಕೋಟಿ ರೂ.ವರೆಗೆ ಸಂಶೋಧನಾ ನಿಧಿಯನ್ನು ಪಡೆಯಲಿದ್ದಾರೆ.
ಈ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡುವುದು ಪೀಠವನ್ನು ಸ್ಥಾಪಿಸುವ ಹಿಂದಿನ ಆಲೋಚನೆಯಾಗಿದೆ. ಈ ಪೀಠಗಳು ಹೆಣ್ಣು ಮಕ್ಕಳಿಗೆ ವಿಜ್ಞಾನಿಗಳ ಮಾರ್ಗಗಳನ್ನು ಅನುಸರಿಸಲು ಪ್ರೇರೇಪಿಸಲಿದೆ. ಪ್ರಸ್ತುತ ಭಾರತದಲ್ಲಿ ಮಹಿಳೆಯ ಹೆಸರಲ್ಲಿ ಏಕೈಕ ಪೀಠ ಮಾತ್ರ ಇದೆ. ಮದರ್ ಥೆರೇಸಾ ಹೆಸರಲ್ಲಿ ಮಾತ್ರ ಪೀಠ ಇದೆ.
ಕಳೆದ ತಿಂಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಹಿಳೆಯರ ಹೆಸರಿನ ಪೀಠಗಳನ್ನು ಮಹಿಳೆಯರಿಗಾಗಿ ಹಲವು ವಿಭಾಗಗಳಲ್ಲಿ ಪ್ರಸ್ತಾಪಿಸಿತ್ತು.
“ಇದು ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರನ್ನು ಬೆಳಕಿಗೆ ತರಲು ಸಹಾಯ ಮಾಡುತ್ತದೆ ಮತ್ತು ಯುವತಿಯರನ್ನು ಅವರ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಲು ಪ್ರೇರೇಪಿಸುತ್ತದೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಮುಂದಿನ ವಾರದಲ್ಲಿ, ಡಿಆರ್ಡಿಒ ಮಹಾನಿರ್ದೇಶಕರು (ಏರೋನಾಟಿಕಲ್ ಸಿಸ್ಟಮ್ಸ್) ಟೆಸ್ಸಿ ಥಾಮಸ್ ಮತ್ತು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆಯನ್ನು ಒಳಗೊಂಡ ಸಮಿತಿಯು ಪೀಠಗಳನ್ನು ಸ್ಥಾಪಿಸುವ ಸಂಸ್ಥೆಗಳನ್ನು ಗುರುತಿಸಲಿದೆ.
ಈ 11 ಪೀಠಗಳನ್ನು ಐದು ವರ್ಷಗಳ ಆರಂಭಿಕ ಅವಧಿಗೆ ಸ್ಥಾಪಿಸಲಾಗುವುದು, ಇದನ್ನು ಸಂಶೋಧನಾ ಅವಶ್ಯಕತೆಗಳ ಆಧಾರದ ಮೇಲೆ ವಿಸ್ತರಿಸಬಹುದು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.