ಶ್ರೀನಗರ: ಈದ್ ಹಬ್ಬದ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿ ಹುರಿಯತ್ ಸದಸ್ಯರು ಶನಿವಾರ ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಪಾಕಿಸ್ಥಾನ, ಇಸಿಸ್, ಲಷ್ಕರ್ ಧ್ವಜಗಳನ್ನೂ ಹಾರಿಸಿ ದೇಶವಿರೋಧಿ ಕೃತ್ಯವೆಸಗಿದ್ದಾರೆ.
ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಮತ್ತು ಮಹಮ್ಮದ್ ಯಾಸೀನ್ ಮಲ್ಲಿಕ್ ಅವರನ್ನು ಈದ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿರುವುದನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.
ಇನ್ನೊಂದೆಡೆ ಯುವಕರ ಗುಂಪೊಂದು ಪೊಲೀಸ್ ಮತ್ತು ಪ್ಯಾರಮಿಲಿಟರಿ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿವೆ. ಈ ವೇಳೆ ಘರ್ಷಣೆ ಸಂಭವಿಸಿದ್ದು ಹಲವರಿಗೆ ಗಾಯಗಳಾಗಿವೆ. ನಿನ್ನೆಯೂ ಪಾಕ್, ಇಸಿಸ್ ಧ್ವಜಗಳನ್ನು ಹಾರಿಸಲಾಗಿದೆ.
ಇನ್ನೊಂದೆಡೆ ಜುಲೈ ೨೧ರಂದು ಪಾಕಿಸ್ಥಾನದ ಹೈಕಮಿಷನರ್ ನವದೆಹಲಿಯಲ್ಲಿ ಏರ್ಪಡಿಸುತ್ತಿರುವ ಈದ್ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಹುರಿಯತ್ ನಾಯಕರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.