ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲೊಂದು ವಿಶಿಷ್ಟ ಸಲೂನ್ ಅಂಗಡಿ ಇದೆ. ಸರದಿಗಾಗಿ ಕಾಯುವಾಗ ಸಮಾನ್ಯವಾಗಿ ಹರಟೆ, ರಾಜಕೀಯ ಚರ್ಚೆಗಳ ಬದಲಾಗಿ ಗ್ರಾಹಕರಿಗೆ ಉತ್ತಮ ಪುಸ್ತಕಗಳನ್ನು ಓದುವ ಸೌಲಭ್ಯ ಇರುವುದು ಈ ಸಲೂನ್ನ ವೈಶಿಷ್ಟ್ಯ.
ಜಮಖಂಡಿ ನಗರದ ಹನುಮಾನ ಚೌಕಿನಲ್ಲಿನ (ಗವಳಿ ಅಡ್ಡಾ) “ದೀಪಕ ಜೆಂಟ್ಸ್ ಪಾರ್ಲರ್” ಒಳಗಡೆ ಕಣ್ಣು ಹಾಯಿಸಿದರೆ ನಿಮ್ಮ ಕಣ್ಣಿಗೆ ಬೀಳುವುದು ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪುಣ್ಯ ಪುರುಷರ ತ್ಯಾಗ ಬಲಿದಾನದ ಪುಸ್ತಕಗಳು. ಅಂಗಡಿಗೆ ಬಂದ ಪ್ರತಿಯೊಬ್ಬ ಗ್ರಾಹಕರಿಗೆ ಪುಸ್ತಕ ಓದಲು ಕೊಡುತ್ತಾರೆ. ದೇಶಭಕ್ತರಾದ ಅಂಗಡಿಯ ಮಾಲೀಕ ಶಿವಾನಂದ ಕೋಲೂರ. ಇಂದಿನ ಯುವ ಪೀಳಿಗೆಗೆ ಹಿಂದೆ ದೇಶಕ್ಕಾಗಿ ಹೋರಾಡಿದ ಯುಗ ಪುರುಷರ ತ್ಯಾಗ ಬಲಿದಾನದ ಮಹತ್ವ ಮತ್ತು ಅವರ ಬಗ್ಗೆ ಪರಿಚಯ ಆಗಲಿ ಅನ್ನೋದು ಇವರ ಉದ್ದೇಶ.
ಶಿವಾನಂದ ಕೋಲೂರ ಅವರ ಸಾಹಿತ್ಯಾಸಕ್ತಿ, ದೇಶಪ್ರೇಮ, ವೃತ್ತಿಯಲ್ಲಿ ವಿಶಿಷ್ಟತೆ, ಎಲ್ಲವೂ ಕೂಡ ಶ್ಲಾಘನೀಯ. ಸಲೂನ್ಗೆ ಬರುವ ಗ್ರಾಹಕರ ಸಮಯದ ಸದ್ಬಳಕೆಗಾಗಿ ಅವರು ಮಾಡಿರುವ ಈ ಚಿಕ್ಕ ಗ್ರಂಥಾಲಯ ಎಲ್ಲರಿಗೂ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.