ಬೆಂಗಳೂರು: ಬೆಂಗಳೂರು ಪೊಲೀಸರು ಭಾರತದ ಟೆಕ್ ರಾಜಧಾನಿಯನ್ನು ಮಹಿಳೆಯರಿಗೆ ಹೆಚ್ಚು ಸುರಕ್ಷಿತವಾದ, ಅಂತರ್ಗತವಾದ ನಗರವನ್ನಾಗಿ ಮಾಡಲು #betogetherbangalore ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ನಗರದ ಮಹಿಳೆಯರಿಗೆ ರಾತ್ರಿಯಲ್ಲಿ ಅನಾನುಕೂಲತೆ ಉಂಟು ಮಾಡುವ, ಅಸುರಕ್ಷತೆಯ ಭಾವನೆಯನ್ನು ನೀಡುವ ಎಂಟು ಬೇರೆ ಬೇರೆ ಸ್ಥಳಗಳನ್ನು ನಮ್ಮ ಪಡೆ ಗುರುತಿಸಿದೆ ಮತ್ತು ಮಹಿಳೆಯರಿಗೆ ಅಲ್ಲಿ ಸಂಪೂರ್ಣ ಸುರಕ್ಷತೆ ನೀಡಲು ನಿರ್ಧರಿಸಿದೆ ಎಂದು ನೈರುತ್ಯ ವಿಭಾಗದ ಬೆಂಗಳೂರು ಪೊಲೀಸ್ ಜಿಲ್ಲಾಧಿಕಾರಿ (ಡಿಸಿಪಿ) ಹೇಳಿದ್ದರು.
ನಗರದಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಸಹಾಯ ಮಾಡಲು ಫೆಬ್ರವರಿ 24 ರಿಂದ ಮಾರ್ಚ್ 8 ರವರೆಗೆ (ಅಂತರರಾಷ್ಟ್ರೀಯ ಮಹಿಳಾ ದಿನ) #betogetherbangalore ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರು ತಾವು ಅಸುರಕ್ಷತೆಯನ್ನು ಅನುಭವಿಸಿದ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಭಿತಿಯಿಂದ ಓಡಾಡುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ.
ಡಿಸಿಪಿ ಇಶಾ ಪಂತ್ ಹೇಳುವಂತೆ ಈ ಅಭಿಯಾನವು, ಮಡಿವಾಲಾ ಮಾರುಕಟ್ಟೆ, ಗ್ರೇಪ್ ಗಾರ್ಡನ್ 6 ನೇ ಬ್ಲಾಕ್ ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್ ಕೋರಮಂಗಲ, ಕೋರಮಂಗಲ ಪಾಸ್ಪೋರ್ಟ್ ಆಫೀಸ್, ಸಿಲ್ಕ್ ಬೋರ್ಡ್ ಜಂಕ್ಷನ್, ಡೈರಿ ಸರ್ಕಲ್, ಸ್ಪೂರ್ತಿ ಹಾಸ್ಪಿಟಲ್ ರೋಡ್ ತವರೇಕೆರೆ ಮತ್ತು ವೀರ ಯೋಧರ ಪಾರ್ಕ್ 4 ನೇ ಬ್ಲಾಕ್ ಕೋರಗನ್ಗಳಲ್ಲಿ ನಡೆಯಲಿದೆ.
ಮಹಿಳೆಯರು ತಮಗೆ ಅಸುರಕ್ಷಿತರೆಂದು ಭಾವಿಸಿರುವ ಈ ಸ್ಥಳಗಳಲ್ಲಿ ಸಂಜೆ 7 ರಿಂದ ರಾತ್ರಿ 10 ರವರೆಗೆ ಪ್ರದೇಶಗಳಿಗೆ ಭದ್ರತೆಯನ್ನು ನೀಡಿ ಮಹಿಳೆಯರ ಸುರಕ್ಷತ ಭಾವವನ್ನು ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.