ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಆರಂಭಿಸಲಾಗಿರುವ ಡಿಜಿಟಲ್ ಲಾಕರ್ ವ್ಯವಸ್ಥೆಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈಗಾಗಲೇ 830,075 ಜನರು ಡಿಜಿಟಲ್ ಲಾಕರ್ ಮುಖಾಂತರ ತಮ್ಮ ಅಮೂಲ್ಯ ದಾಖಲೆಗಳನ್ನು ಭದ್ರವಾಗಿಟ್ಟಿದ್ದಾರೆ.
ಬರ್ತ್ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್, ಆಸ್ತಿ ವಿವರ ಮುಂತಾದ ಅಗತ್ಯ ದಾಖಲೆಗಳನ್ನು ಇ-ಡಾಕ್ಯುಮೆಂಟ್ ಮಾಡಿಕೊಂಡು ಡಿಜಿಟಲ್ ಲಾಕರ್ನಲ್ಲಿ ಭದ್ರವಾಗಿಸುವ ಯೋಜನೆ ಇದಾಗಿದೆ. ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಮೂಲಕ ಲಾಗ್ ಇನ್ ಆಗಿ ಪ್ರತಿಯೊಬ್ಬರೂ ತಮ್ಮ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬಹುದು. ಇದಕ್ಕೆ ಪಿನ್ ಕೋಡ್ ಇರುವುದರಿಂದ ದಾಖಲೆಗಳು ಭದ್ರವಾಗಿರುತ್ತದೆ.
ಇದರಿಂದಾಗಿ ಸರ್ಕಾರಿ ಕಾರ್ಯಗಳಿಗೆ ಹೋಗುವಾಗ ದಾಖಲೆಗಳನ್ನು ಕೈಯಲ್ಲಿ ಹೊತ್ತುಕೊಂಡು ಹೋಗಬೇಕಾದ ಅಗತ್ಯವಿರುವುದಿಲ್ಲ. ಪಿನ್ಕೋಡ್ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಬಹುದು. ಇಲ್ಲಿ ಯಾವುದೇ ವಂಚನೆಗಳಾಗುವ ಸಂಭವ ಕಡಿಮೆ ಇರುತ್ತದೆ.
ನರೇಂದ್ರ ಮೋದಿ ಸರ್ಕಾರದ ಈ ಯೋಜನೆ ಜನರನ್ನು ಆಕರ್ಷಿಸಿದ್ದು, ಅತಿ ಹೆಚ್ಚು ಪ್ರಮಾಣದಲ್ಲಿ ಜನರು ತಮ್ಮ ದಾಖಲೆಗಳನ್ನು ಡಿಜಟಲೀಕರಣಗೊಳಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.