ಮಂಡ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಫೆ. 23 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ಮಂಡ್ಯದ ಸಾತನೂರಿನಲ್ಲಿರುವ ಅಚೀವರ್ಸ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ‘ಕಾವೇರಿ ಡಿಬೇಟ್ ; ರಾಷ್ಟ್ರೀಯವಾದಿಗಳ ಸಮ್ಮಿಲನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಾಗತಿಕ ಪರಿದೃಷ್ಟಿಯಲ್ಲಿ ರಾಷ್ಟ್ರೀಯ ನೆಲೆ ಕುರಿತು ವಿಷಯ ಮಂಡಿಸಲಿದ್ದಾರೆ. ಪರಿಷತ್ನ ಡಾ.ಸುಧಾಕರ ಹೊಸಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಪರಿಷತ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಮಾಧವ ಮಂಗಳೂರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಧಾರ್ಮಿಕ ಆಚರಣೆಗಳು ಮತ್ತು ರಾಷ್ಟ್ರೀಯ ಏಕತೆ ಕುರಿತು ಕರ್ನಾಟಕ ಸಂಘಚಾಲಕ ಮಾ.ವೆಂಕಟರಾಮ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಉರೀಗೌಡ ವೇದಿಕೆಯಲ್ಲಿ ಟಿಪ್ಪು ಮತ್ತು ವಾಸ್ತವಿಕ ನೆಲೆ ಕುರಿತು ಪರಿಷತ್ ಕಾರ್ಯದರ್ಶಿ ಕೊಕ್ಕಡ ವೆಂಕಟರಮಣ ಭಟ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಟಿಪ್ಪು ಮತ್ತು ಮಾನವತಾವಾದದ ಕರಾಳ ಮುಖಗಳ ಕುರಿತು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿಷಯ ಮಂಡನೆ ಮಾಡಲಿದ್ದಾರೆ.
ಸಂಚಿಹೊನ್ನಮ್ಮ ವೇದಿಕೆಯಲ್ಲಿ ಮಂಡ್ಯ ಜಿಲ್ಲೆಯ ರಾಜ ಪರಂಪರೆ ಮತ್ತು ಐತಿಹಾಸಿಕ ಅವಲೋಕನ ಕುರಿತು ಪತ್ರಕರ್ತ ಕೊಳಲು ಶ್ರೀಪಾದು, ಮೈಸೂರು ಸಂಸ್ಥಾನದ ಆಧುನಿಕ ಶಿಕ್ಷಣದ ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಪಿ.ಪ್ರದೀಪ್ಕುಮಾರ್ ವಿಚಾರ ಮಂಡಿಸುವರು. ಪೌರತ್ಮ ಕಾಯ್ದೆ ಸಾಂವಿಧಾನಿಕ ನಿಯಮಾವಳಿಗಳ ಮಾಪನ ಕುರಿತು ವಕೀಲ ಕೃಷ್ಣಮೂರ್ತಿ ಕೊಡಗು ಅಧ್ಯಕ್ಷತೆಯಲ್ಲಿ ವಿಚಾರಗೊಷ್ಠಿ ನಡೆಯಲಿದೆ. ವಕೀಲ ವಿಜಯ್ಕುಮಾರ್ ಮಾತನಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ 2021ರ ಕಾವೇರಿ ಡಿಬೆಟ್ ಕ್ರಿಯಾ ಯೋಜನೆ ಮಂಡನೆಯಾಗಲಿದೆ. ಪ್ರಜ್ಞಾ ಪ್ರವಾಹ ಪೂರ್ವ ಸಂಚಾಲಕ ರಘುನಂದನ್ ಸಮಾರೋಪ ಭಾಷಣ ಮಾಡಲಿದ್ದಾರೆ. ರಾಷ್ಟ್ರಪರ ಚಿಂತಕ ಪ್ರೊ.ಪ್ರೇಮಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.