ಹಂಪಿ: ರಾಮ ಭಕ್ತ ಆಂಜನೇಯನ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಕರ್ನಾಟಕದ ಹಂಪಿಯಲ್ಲಿ ನಿರ್ಮಾಣ ಮಾಡಲು ಹನುಮಾನ್ ಜನ್ಮಭೂಮಿ ಟ್ರಸ್ಟ್ ಪ್ರಸ್ತಾಪಿಸಿದೆ. ಹಂಪಿಯಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಆಂಜನೇಯನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ.
ಕರ್ನಾಟಕ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಟ್ರಸ್ಟ್ ಅನ್ನು ಫೆಬ್ರವರಿ 5 ರಂದು ಸ್ಥಾಪಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದ ಮೇಲ್ವಿಚಾರಣೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿದ ಮಾದರಿಯಲ್ಲೇ ಈ ಟ್ರಸ್ಟ್ ಇದೆ.
ಟ್ರಸ್ಟ್ನ ಮೂಲಗಳ ಪ್ರಕಾರ, ಈಗಾಗಲೇ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಹಂಪಿಯನ್ನು ಹನುಮಾನ್ ಜನ್ಮಭೂಮಿಯ ಒಂದು ತೀರ್ಥಯಾತ್ರೆಯ ಕೇಂದ್ರವನ್ನಾಗಿ ಮಾಡಲು ನಿರ್ಧರಿಸಲಾಗಿದೆ. “ಈ ಕ್ಷೇತ್ರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಅದರ ಭವ್ಯತೆಗೆ ಸಮನಾಗಿರುತ್ತದೆ. ಅಯೋಧ್ಯೆಯಲ್ಲಿ, ವಿಶ್ವದ ಅತಿ ಎತ್ತರದ ರಾಮ ಪ್ರತಿಮೆಯನ್ನು 225 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ರಾಮ, ಹನುಮಾನ್ ಬೇರ್ಪಡಿಸಲಾಗದವರು, ಹೀಗಾಗಿ ನಾವು ಕೂಡ ಅತಿ ಎತ್ತರದ ಹನುಮಂತನ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. ಆದರೆ ಇದು ರಾಮನಿಗಿಂತ 10 ಅಡಿ ಚಿಕ್ಕದಾಗಿರುತ್ತದೆ. ಹನುಮಾನ್ ಪ್ರತಿಮೆಯನ್ನು ತಾಮ್ರದಿಂದ ನಿರ್ಮಾಣ ಮಾಡಲಾಗುವುದು” ಎಂದು ಟ್ರಸ್ಟ್ ಹೇಳಿದೆ.
ಹಂಪಿಯಲ್ಲಿ ಕಿಷ್ಕಿಂಧ ಪಂಪ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ.
ತೀರ್ಥಯಾತ್ರೆಯ ಸ್ಥಳಕ್ಕಾಗಿ 10 ಎಕರೆ ಭೂಮಿಯನ್ನು ಖರೀದಿಸಲು ಟ್ರಸ್ಟ್ ಯೋಜಿಸುತ್ತಿದೆ ಮತ್ತು ಈ ವರ್ಷ ಹನುಮಾನ್ ಜಯಂತಿಯಂದು ಅಯೋಧ್ಯೆಯಿಂದ 101 ಸಂತರನ್ನು ಆಹ್ವಾನಿಸಲು ಟ್ರಸ್ಟ್ ಸದಸ್ಯರು ತೀರ್ಮಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.