ನವದೆಹಲಿ: 2019-20ರ ಆರ್ಥಿಕ ವರ್ಷದಲ್ಲಿ ಒಟ್ಟು 292 ಮೆಟ್ರಿಕ್ ಟನ್ ಮೊತ್ತದ ಸಾರ್ವಕಾಲಿಕ ಉನ್ನತ ಮಟ್ಟದ ಆಹಾರ ಉತ್ಪಾದನೆಯನ್ನು ದಾಖಲಿಸಲು ನಮ್ಮ ರಾಷ್ಟ್ರವು ಸಜ್ಜಾಗಿದೆ, ಹಿಂದಿನ ಹಣಕಾಸು ವರ್ಷದಲ್ಲಿ 285.21 ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿತ್ತು.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಆಹಾರ ಧಾನ್ಯಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜಿನ ಪ್ರಕಾರ, ಪ್ರಸ್ತುತ ವರ್ಷದಲ್ಲಿ ಅಕ್ಕಿ ಮತ್ತು ಗೋಧಿ ಎರಡರ ದಾಖಲೆಯ ಮಟ್ಟದ ಉತ್ಪಾದನೆಯ ಮೂಲಕ ರಾಷ್ಟ್ರೀಯ ಆಹಾರ ಉತ್ಪಾದನೆಯು ಏರಿಕೆಯನ್ನು ಕಾಣುತ್ತಿದೆ.
ಅಕ್ಕಿ ಉತ್ಪಾದನೆಯು 117.47 ಮೆಟ್ರಿಕ್ ಟನ್ (2018-19ರಲ್ಲಿ 116.48 ಮೆಟ್ರಿಕ್ ಟನ್ ಆಗಿತ್ತು) ಎಂದು ನಿರೀಕ್ಷಿಸಲಾಗಿದ್ದರೆ, ಗೋಧಿಯ ಉತ್ಪಾದನೆಯು ಅತ್ಯುತ್ತಮ 106.21 ಮೆಟ್ರಿಕ್ ಟನ್ (2018-19ರಲ್ಲಿ 103.60 ಮೆಟ್ರಿಕ್ ಟನ್ ಆಗಿತ್ತು)ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಈ ನಡುವೆ, ಸೋಯಾಬಿನ್, ಸಾಸಿವೆ ಮತ್ತು ನೆಲಗಡಲೆಯ ಮೂರು ಪ್ರಮುಖ ಎಣ್ಣೆಕಾಳುಗಳ ಉತ್ಪಾದನೆಯು ಶೇಕಡಾ 8.6 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದ್ದು, 2018-19ರಲ್ಲಿ ಇದು 31.52 ಮೆಟ್ರಿಕ್ ಟನ್ ಉತ್ಪಾದನೆಯನ್ನು ಕಂಡಿತ್ತು. ಈ ಬಾರಿ ಒಟ್ಟು 34.2 ಮೆಟ್ರಿಕ್ ಟನ್ಗೆ ಏರಿದೆ ಎಂಬುದು ಗಮನಾರ್ಹವಾಗಿದೆ.
ಎಣ್ಣೆಕಾಳುಗಳಲ್ಲಿ, ನೆಲಗಡಲೆ ಉತ್ಪಾದನೆಯು ಹೆಚ್ಚಿನ ಲಾಭವನ್ನು ಗಳಿಸುವ ನಿರೀಕ್ಷೆಯಿದೆ, ಉತ್ಪಾದನಾ ಅಂಕಿ ಅಂಶವು 2018-19ರಲ್ಲಿ ಇದ್ದ 6.73 ಮೆಟ್ರಿಕ್ ಟನ್ನಿಂದ ಪ್ರಸ್ತುತ ವರ್ಷದಲ್ಲಿ 8.24 ಮೆಟ್ರಿಕ್ ಟನ್ಗೆ ಏರಿಕೆಯಾಗುವ ಸಾಧ್ಯತೆಯಿದೆ.
ಅಂತೆಯೇ, ಸಿರಿಧಾನ್ಯಗಳ ಉತ್ಪಾದನೆಯು ಶೇಕಡಾ 5 ರಷ್ಟು ಏರಿಕೆ ದಾಖಲಿಸುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.