ನವದೆಹಲಿ: ಡಿ-ಮಾರ್ಟ್ ಆಗಿ ವ್ಯವಹಾರ ನಡೆಸುತ್ತಿರುವ ಅವೆನ್ಯೂ ಸೂಪರ್ಮಾರ್ಟ್ಸ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಈಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಂತರ ದೇಶದ ಎರಡನೇ ಶ್ರೀಮಂತ ಭಾರತೀಯನಾಗಿ ಹೊರಹೊಮ್ಮಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಶೇಷವೆಂದರೆ, ಉದ್ಯಮಿ ಶಿವ ನಾಡರ್, ಬ್ಯಾಂಕರ್ ಉದಯ್ ಕೊಟಕ್ ಮತ್ತು ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಲಕ್ಷ್ಮಿ ಮಿತ್ತಲ್ ಸೇರಿದಂತೆ ಹಲವು ಶ್ರೀಮಂತ ದಿಗ್ಗಜರನ್ನು ಹಿಂದಿಕ್ಕಿ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಫೋರ್ಬ್ಸ್ನ ರಿಯಲ್ ಟೈಮ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ದಮಾನಿ ಒಟ್ಟು 9 17.9 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ ಮತ್ತು ಆರ್ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿಗಿಂತ ಒಂದು ಸ್ಥಾನ ಹಿಂದೆ ಇದ್ದಾರೆ. ಅಂಬಾನಿ ಅವರು ಭಾರತದ ಮಾತ್ರವಲ್ಲದೇ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದು, ಇವರ ಒಟ್ಟು ನಿವ್ವಳ ಮೌಲ್ಯ $ 57.9 ಬಿಲಿಯನ್ ಆಗಿದೆ.
ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್ ಭಾರತದ ಅತ್ಯಂತ ಲಾಭದಾಯಕ ಗ್ರೋಸರಿ ಚೈನ್ಗಳಲ್ಲಿ ಒಂದಾಗಿದೆ ಮತ್ತು ಇದು ದೇಶದಲ್ಲಿ 196 ಮಳಿಗೆಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.