ಕಲಬುರ್ಗಿ: ಹದಿನಾಲ್ಕು ವರ್ಷಗಳ ಜೈಲುವಾಸ ಕೂಡ ಇವರ ವೈದ್ಯನಾಗುವ ಕನಸನ್ನು ಕಿತ್ತುಕೊಳ್ಳಲಿಲ್ಲ. ಕಂಬಿಗಳ ಹಿಂದೆಯೇ ಇದ್ದು ವೈದ್ಯನಾಗಬೇಕೆಂಬ ಕನಸನ್ನು ಜೀವಂತವಾಗಿಟ್ಟುಕೊಂಡ ಸುಭಾಷ್ ಪಾಟೀಲ್ ಅವರು ಇಂದು ವೈದ್ಯನಾಗಿ ಹೊರಹೊಮ್ಮಿದ್ದಾರೆ.
2002ರಲ್ಲಿ ಎಂಬಿಬಿಎಸ್ ಮಾಡುವಾಗ ಕರ್ನಾಟಕದ ಕಲಬುರ್ಗಿಯ ಅಫ್ಜಲ್ಪುರದ 40 ವರ್ಷದ ಸುಭಾಷ್ ಅವರನ್ನು ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಬಂಧಿಸಲಾಯಿತು. ಅಲ್ಲಿಂದ 14 ವರ್ಷಗಳ ಕಾಲ ಅವರು ಜೈಲಿನಲ್ಲಿದ್ದರು. ಜೈಲಲ್ಲೇ ಎಂಬಿಬಿಎಸ್ ಮುಗಿಸಿ ಅವರು ವೈದ್ಯರಾಗಿದ್ದಾರೆ. 2016ರಲ್ಲಿ ಬಿಡುಗಡೆಗೊಂಡ ಅವರು ಇಂದು ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ನಾನು 1997 ರಲ್ಲಿ ಎಂಬಿಬಿಎಸ್ ಸೇರಿಕೊಂಡೆ. ಆದರೆ, ನಾನು 2002ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲಿ ಸೇರಬೇಕಾಯಿತು. ನಾನು ಜೈಲಿನ ಒಪಿಡಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಉತ್ತಮ ನಡವಳಿಕೆಗಾಗಿ 2016 ರಲ್ಲಿ ಬಿಡುಗಡೆಯೂ ಆದೆ. 2019 ರಲ್ಲಿ ನನ್ನ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿದ್ದೇನೆ” ಎಂದು ಸುಭಾಷ್ ಹೇಳುತ್ತಾರೆ.
ಈ ತಿಂಗಳ ಆರಂಭದಲ್ಲಿ, ಅವರು ಎಂಬಿಬಿಎಸ್ ಕೋರ್ಸ್ ಪದವಿ ಪಡೆಯಲು ಕಡ್ಡಾಯವಾದ ಒಂದು ವರ್ಷದ ಇಂಟರ್ನ್ಶಿಪ್ ಅನ್ನು ಪೂರೈಸಿದ್ದಾರೆ.
ಸುಭಾಷ್ ಪಾಟೀಲ್ ಎಂಬಿಬಿಎಸ್ ಕೋರ್ಸ್ನ ಮೂರನೇ ವರ್ಷದಲ್ಲಿದ್ದಾಗ 2002 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ನ್ಯಾಯಾಲಯವು 2006 ರಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಕಂಬಿಗಳ ಹಿಂದೆ ಇದ್ದರೂ ಅವರು ವೈದ್ಯನಾಗಬೇಕೆಂಬ ತನ್ನ ಬಾಲ್ಯದ ಕನಸನ್ನು ಕೈ ಬಿಡಲಿಲ್ಲ. ಪಾಟೀಲ್ ಅವರ ಉತ್ತಮ ನಡವಳಿಕೆಗಾಗಿ 2016 ರಲ್ಲಿ ಪೊಲೀಸರು ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.