ದಿಮಾಪುರ್: ಬಯಲು ಶೌಚ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ಹಿನ್ನಲೆಯಲ್ಲಿ ಎಲ್ಲಾ ರಾಜ್ಯಗಳು ವಿವಿಧ ಅಭಿಯಾನಗಳನ್ನು, ಯೋಜನೆಗಳನ್ನು ಆರಂಭಿಸಿವೆ. ಜನರಿಗೆ ಶೌಚಾಲಯದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ನಾಗಾಲ್ಯಾಂಡ್ ಸುಂದರ, ಆಕರ್ಷಕ ಮತ್ತು ಪರಿಸರ ಸ್ನೇಹಿ ಬಿದಿರಿನ ಶೌಚಾಲಯಗಳನ್ನು ನಿರ್ಮಿಸಿದೆ. ಸ್ವಚ್ಛ ಭಾರತದ ಅಭಿಯಾನದ ಅಂಗವಾಗಿ ಅಲ್ಲಿನ ಬ್ಯಾಂಬೂ ರಿಸರ್ಚ್ ಸೆಂಟರ್ ಬಿದಿರಿನ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ಈಗಾಗಲೇ ಎರಡು ಮಾದರಿ ಬಿದಿರಿನ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅಲ್ಲಿನ ರಾಜ್ಯಪಾಲ ಪಿ.ಬಿ.ಆಚಾರ್ಯ ಇದರ ಉದ್ಘಾಟನೆಯನ್ನೂ ಮಾಡಿದ್ದಾರೆ. ಇದು ದೇಶದ ಪ್ರಥಮ ಬಿದಿರಿನ ಶೌಚಾಲಯವಾಗಿದೆ.
ಖಾಸಗಿ ಮತ್ತು ಸಮುದಾಯದ ಬಳಕೆಗಾಗಿ ಈ ಬಿದಿರಿನ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಪ್ರಕೃತಿದತ್ತವಾಗಿ ದೊರೆಯುವ ಬಿದಿರಿನಿಂದ ತಯಾರಿಸಲ್ಪಡುವ ಈ ಶೌಚಾಲಯದ ನಿರ್ಮಾಣಕ್ಕೆ ಅಷ್ಟೊಂದು ಹಣದ ಅಗತ್ಯವೂ ಇಲ್ಲ ಮತ್ತು ಇದು ಪರಿಸರ ಸ್ನೇಹಿ ಶೌಚಾಲಯವಾಗಿದೆ.
ಇಂತಹ ಬಿದಿರಿನ ಶೌಚಾಲಯಗಳನ್ನು ದೇಶದೆಲ್ಲಡೆ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಇದರಿಂದ ಬಡವರಿಗೆ ಪ್ರಯೋಜನವಾಗುವುದಲ್ಲದೆ, ಸ್ವಚ್ಛ ಭಾರತ ಅಭಿಯಾನದ ಗುರಿಯೂ ಸಾಕಾರಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.