ಬೆಂಗಳೂರು: ಬೆಂಗಳೂರು ಪೊಲೀಸರ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕ ಶಾಸಕಾಂಗವು ಹಾಲಿ ಮತ್ತು ಮಾಜಿ ಶಾಸಕರ ಅಧಿಕೃತ ವಾಹನಗಳ ಮೇಲೆ ಗ್ಲೋಬಲ್ ಪೊಝಿಶನಂಗ್ ಸಿಸ್ಟಮ್ (ಜಿಪಿಎಸ್) ಅಳವಡಿಸಲು ಯೋಜಿಸಿದೆ. ಮೊದಲ ಬಾರಿಗೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ.
ಶಾಸಕರ ವಾಹನಗಳನ್ನು ಅಪಾರ ಪ್ರಮಾಣದ ಹಣವನ್ನು ಸಾಗಿಸಲು ಬಳಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂತಹ ಕೆಲವೊಂದು ಪ್ರಕರಣಗಳನ್ನು ಈಗಾಗಲೇ ಪೊಲೀಸರು ತನಿಖೆಗೆ ಒಳಪಡಿಸುತ್ತಿದ್ದಾರೆ.
ಈ ಹಿಂದೆಯೇ ಶಾಸಕಾಂಗವು ತನ್ನ ಎಲ್ಲಾ 38 ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿತ್ತು, ಆದರೆ ತಾಂತ್ರಿಕ ಕಾರಣಗಳಿಂದಾಗಿ ಈ ಕ್ರಮವು ವಿಫಲವಾಯಿತು. ಇದೀಗ ಮತ್ತೆ ಈ ವಿಷಯವನ್ನು ಮುನ್ನಲೆಗೆ ತರಲಾಗಿದೆ.
ಎರಡು ತಿಂಗಳ ಹಿಂದೆ, ಹೈ-ಎಂಡ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ (ವಿಟಿಎಸ್) ಅಳವಡಿಸುವ ಟೆಂಡರ್ ಅನ್ನು ಕೌನ್ಸಿಲ್ ಸೆಕ್ರೆಟರಿಯೇಟ್ ಮುಂದಿಟ್ಟಿದೆ. ಈ ಸಾಧನಗಳು ಸ್ಥಳ, ವೇಗ, ನೈಜ ಸಮಯದ ವಾಹನ ಸ್ಥಾನ, ಇಂಧನ ಬಳಕೆ, ನಿರ್ದೇಶನ ಮತ್ತು ಪ್ರಯಾಣದ ವೆಚ್ಚವನ್ನು ಪತ್ತೆಹಚ್ಚುವ ಉದ್ದೇಶವನ್ನು ಒಳಗೊಂಡಿದೆ.
ಜಿಪಿಎಸ್ ಅಳವಡಿಕೆಯಿಂದ ವಾಹನಗಳ ದುರ್ಬಳಕೆ ಸಾಕಷ್ಟು ಪ್ರಮಾಣದಲ್ಲಿ ಕುಗ್ಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.