ಬೆಂಗಳೂರು: ಬೀದರ್ ಜನತೆಯ ಬಹು ದಿನಗಳ ಕನಸು ನನಸಾಗಿದೆ. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯಡಿ ಬೆಂಗಳೂರು ಮತ್ತು ಬೀದರ್ ನಡುವೆ ವಿಮಾನ ಹಾರಾಟ ಇಂದಿನಿಂದ ಆರಂಭಗೊಂಡಿದೆ. ವೈಮಾನಿಕ ಸೇವೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಚಾಲನೆಯನ್ನು ನೀಡಿದರು.
ಬೆಂಗಳೂರಿನಿಂದ ಬೀದರ್ಗೆ ರಸ್ತೆ ಮಾರ್ಗವಾಗಿ ಬರಬೇಕಾದರೆ 12 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ವಿಮಾನದಲ್ಲಿ 1 ಗಂಟೆ 40 ನಿಮಿಷಕ್ಕೆ ಬೀದರ್ಗೆ ತಲುಪಬಹುದು. ನಿತ್ಯ ಟ್ರೂಜೆಟ್ ಬೀದರ್-ಬೆಂಗಳೂರು ನಡುವೆ ಹಾರಾಟ ನಡೆಸಲಿದೆ. ಈ ವಿಮಾನ ಹಾರಾಟವು ಕಲ್ಯಾಣ ಕರ್ನಾಟಕ ಅಭಿವೃದ್ದಿಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ.
ಬೀದರ್ ವಿಮಾನ ನಿಲ್ದಾಣವನ್ನು ಅಂದಾಜು 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಾಯದಿಂದ ವೆಚ್ಚವನ್ನು ಸರಿದೂಗಿಸಿದೆ.
ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನ ಅಂಗಸಂಸ್ಥೆಯಾದ ಜಿಎಂಆರ್ ಹೈದರಾಬಾದ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (GHIAL) ಕರ್ನಾಟಕದ ಬೀದರ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಬೀದರ್ ವಿಮಾನ ನಿಲ್ದಾಣ ಇಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಹಿನ್ನಲೆಯಲ್ಲಿ ಕರ್ನಾಟಕದ ಸಕ್ರಿಯ ನಾಗರಿಕ ವಿಮಾನ ನಿಲ್ದಾಣಗಳ ಸಂಖ್ಯೆ ಬೆಂಗಳೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಬಳ್ಳಾರಿ ಸೇರಿದಂತೆ ಎಂಟಕ್ಕೆ ಏರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.