ನವದೆಹಲಿ: ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಂಪು ಬಟ್ಟೆಯಲ್ಲಿ ಸುತ್ತಿದ ಬಜೆಟ್ ದಾಖಲೆಯೊಂದಿಗೆ ಸಂಸತ್ತಿಗೆ ಆಗಮಿಸಿದ್ದಾರೆ. ಈ ಬಜೆಟಿನಲ್ಲಿ ನರೇಂದ್ರ ಮೋದಿ ಸರ್ಕಾರವು ಮೂಲಸೌಕರ್ಯಕ್ಕಾಗಿ ಸರ್ಕಾರದ ಬಜೆಟ್ ಅನ್ನು ಹೆಚ್ಚಿಸುವ ಮತ್ತು ಕೆಲವು ಆದಾಯ ತೆರಿಗೆ ಪ್ರೋತ್ಸಾಹವನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 11 ಗಂಟೆಗೆ ತಮ್ಮ ಬಜೆಟ್ ಭಾಷಣವನ್ನು ಮಂಡಿಸಲಿದ್ದಾರೆ. ಈ ವರ್ಷದ ಮೊದಲ ಬಜೆಟ್ ಮತ್ತು ಈ ದಶಕದ ಮೊದಲ ಬಜೆಟ್ ಇದಾಗಿದೆ. ದಶಕದಲ್ಲಿ ಕನಿಷ್ಠ ಮಟ್ಟದಲ್ಲಿರುವ ಬೆಳವಣಿಗೆಯನ್ನು ಮರಳಿ ಪಡೆಯುವ ಗುರಿಯನ್ನು ಈ ಬಜೆಟ್ ಹೊಂದಿದೆ.
ಶುಕ್ರವಾರ ಬಿಡುಗಡೆಯಾದ ತನ್ನ ಆರ್ಥಿಕ ಸಮೀಕ್ಷೆ 2020 ರಲ್ಲಿ, ಕೇಂದ್ರ ಸರ್ಕಾರವು ಆರ್ಥಿಕ ಪ್ರಗತಿಯು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷದಲ್ಲಿ 6.0% ರಿಂದ 6.5% ರವರೆಗೆ ಏರಿಕೆಯಾಗಲಿದೆ ಎಂದು ಊಹಿಸಿದೆ.
ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸುತ್ತಿರುವ ಎರಡನೇ ಬಜೆಟ್ ಇದಾಗಿದ್ದು, ದೇಶದ ಚಿತ್ತ ಅವರು ಮಂಡನೆಗೊಳಿಸುತ್ತಿರುವ ಬಜೆಟ್ ಮೇಲೆಯೇ ನೆಟ್ಟಿದೆ.
2015-16 ರ ನಂತರ ಮೊದಲ ಬಾರಿಗೆ ಶನಿವಾರ ಬಜೆಟ್ ಮಂಡನೆಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.