ಮುಂಬಯಿ: ಕಬೀರ್ ಖಾನ್ ಅವರ ವೆಬ್ ಸರಣಿ “ದಿ ಫಾರ್ಗಾಟನ್ ಆರ್ಮಿ: ಅಜಾದಿ ಕೆ ಲಿಯೆ” ಆಲ್ಬಂಗಾಗಿ ಶುಕ್ರವಾರ ರಾತ್ರಿ 1,000 ಗಾಯಕರು ಮತ್ತು ವಾದ್ಯಸಂಗೀತ ವಾದಕರು ಒಟ್ಟಾಗಿ ಪ್ರದರ್ಶನ ನೀಡಿದ್ದಾರೆ. ಈ ಸಾಧನೆಯು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಗಳಿಸಿದೆ.
ಗಿನ್ನೆಸ್ ಪುಸ್ತಕವು ಇದನ್ನು ಅತಿದೊಡ್ಡ ಭಾರತೀಯ ಸಿನೆಮ್ಯಾಟಿಕ್ ಮ್ಯೂಸಿಕ್ ಬ್ಯಾಂಡ್ ಎಂದು ಪರಿಗಣಿಸಿದೆ. ಸಂಜೆ ದೇಶದಾದ್ಯಂತ 1,000 ಸಂಗೀತಗಾರರು ಒಟ್ಟಾಗಿ ಪ್ರೀತಮ್ ಸಂಯೋಜಿಸಿದ ಸರಣಿಯ ಆಲ್ಬಂನ ಹಾಡುಗಳನ್ನು ಪ್ರದರ್ಶಿಸಿದರು.
ಸಂಗೀತ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕಬೀರ್ “ನನ್ನ ಮೊದಲ ಚಲನಚಿತ್ರ ನಿರ್ಮಾಣ ಯೋಜನೆಯೂ ಕೂಡ ಇದೇ ಹೆಸರಿನ ಸಾಕ್ಷ್ಯಚಿತ್ರ – ‘ದಿ ಫಾರ್ಗಾಟನ್ ಆರ್ಮಿ’ ಆಗಿತ್ತು. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ನಾನು ಐಎನ್ಎ ಪರಿಣತರನ್ನು ಸಂಪರ್ಕಿಸಿದೆ, 1940 ರ ದಶಕದಿಂದ ಅವರ ಪಯಣದ ಬಗ್ಗೆ ತಿಳಿದುಕೊಂಡೆ, ಕೆಲವೇ ಭಾರತೀಯರು ಮಾತ್ರ ಇಂಡಿಯನ್ ನ್ಯಾಷನಲ್ ಆರ್ಮಿ ಯೋಧರ ವೀರತ್ವದ ಬಗ್ಗೆ ಅಥವಾ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಬಗ್ಗೆ ತಿಳಿದಿದ್ದರು. ಅಪಾರ ಶೌರ್ಯದ ಹೊರತಾಗಿಯೂ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಇವರ ಬಗ್ಗೆ ಉಲ್ಲೇಖಗಳಿರುವುದು ಕಡಿಮೆ. ಹೀಗಾಗಿ ಅವರ ಕಥೆಯನ್ನು ಭಾರತಕ್ಕೆ ಮತ್ತು ಜಗತ್ತಿಗೆ ಹೇಳಬೇಕೆಂದು ನಾನು ಪ್ರತಿಜ್ಞೆ ಮಾಡಿದೆ. ಭಾರತದ 70 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ‘ದಿ ಫಾರ್ಗಾಟನ್ ಆರ್ಮಿ – ಅಜಾದಿ ಕೆ ಲಿಯೆ’ ಬಿಡುಗಡೆಯು ಅವರ ಕಥೆಯನ್ನು ಜಗತ್ತಿಗೆ ಕೊಂಡೊಯ್ಯುವ ನನ್ನ ಪ್ರಯತ್ನವಾಗಿದೆ. ಕಾರ್ಯಕ್ರಮದ ಆಲ್ಬಮ್, ಇಂದಿನ ಲೈವ್ 1000 ಬ್ಯಾಂಡ್ನ ಸಂಗೀತ ಸೆರೆನೇಡ್ ಎಲ್ಲವೂ ಆಜಾದ್ ಹಿಂದ್ ಫೌಜ್ನ ಉತ್ಸಾಹವನ್ನು ಸೆರೆಹಿಡಿಯುತ್ತದೆ.” ಎಂದಿದ್ದಾರೆ.
“ಆಜಾದ್ ಹಿಂದ್ ಫೌಜ್ನ ಧೀರ ಸೈನಿಕರ ನೆನಪಿಗಾಗಿ, ಈ ಪ್ರತಿಭಾನ್ವಿತ ಸಂಗೀತಗಾರರ ಸಾಮೂಹದ ಜೊತೆ ಈ ಅನನ್ಯ ಲೈವ್ ಪ್ರದರ್ಶನಕ್ಕೆ ಸಾಕ್ಷಿಯಾಗಲು ಮತ್ತು ಭಾಗವಾಗಲು ನನಗೆ ಅವಕಾಶ ಸಿಕ್ಕಿದೆ ಎಂದು ನಾನು ರೋಮಾಂಚನಗೊಂಡಿದ್ದೇನೆ. ಈ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರೂ ಮರೆತುಹೋದ ಇತಿಹಾಸ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಯ ತ್ಯಾಗವನ್ನು ಅರ್ಥಮಾಡಿಕೊಳ್ಳಲು ಒಂದು ಅದ್ಭುತ ಕ್ಷಣ” ಎಂದು ಪ್ರೀತಮ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.