ಲಕ್ನೋ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಭಾನುವಾರ ಬ್ರಿಟಿಷ್ ಯುಗದ ಐತಿಹಾಸಿಕ ಬೋಲ್ಟ್-ಆ್ಯಕ್ಷನ್ ರೈಫಲ್ಗಳಿಗೆ ಗುಡ್ ಬೈ ಹೇಳಿದ್ದಾರೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಇವುಗಳನ್ನು ಕೊನೆಯ ಸೆಲ್ಯೂಟ್ಗೆ ಬಳಕೆ ಮಾಡುವ ಮೂಲಕ ವಿದಾಯ ಹೇಳಲಾಯಿತು.
ಲೀ-ಎನ್ಫೀಲ್ಡ್ 303 ರೈಫಲ್ ಬ್ರಿಟಿಷ್ ವಸಾಹತುಶಾಹಿ ಮಿಲಿಟರಿ ಪಡೆಗಳ ಮುಖ್ಯ ಬಂದೂಕಾಗಿದ್ದವು, ಸುಮಾರು 25 ವರ್ಷಗಳ ಹಿಂದೆಯೇ “ಬಳಕೆಯಲ್ಲಿಲ್ಲದ” ಎಂದು ಗೊತ್ತುಪಡಿಸಿದರೂ, ಇದು ಉತ್ತರ ಪ್ರದೇಶ ರಾಜ್ಯದಲ್ಲಿ ಏಳು ದಶಕಗಳಲ್ಲಿ ಪೊಲೀಸರು ಬಳಸಿದ ಮುಖ್ಯ ಅಸ್ತ್ರವಾಗಿತ್ತು.
ಎರಡು ವಿಶ್ವ ಯುದ್ಧಗಳ ಸಮಯದಲ್ಲಿ ಬ್ರಿಟಿಷರು ಬಳಸಿದ ರೈಫಲ್ ಇದಾಗಿದೆ. ಏಕ ಸಮಯದಲ್ಲಿ ಒಂದು ಶಾಟ್ ಹಾರಿಸುತ್ತದೆ, ನಂತರ ಬೋಲ್ಟ್ ಅನ್ನು ಎಳೆಯುವ ಮೂಲಕ ಬ್ಯಾರೆಲ್ ಅನ್ನು ಮರು ಲೋಡ್ ಮಾಡಬೇಕಾಗುತ್ತದೆ.
“ಈ ಶಸ್ತ್ರಗಳು ಸ್ವಾತಂತ್ರ್ಯದ ನಂತರವೂ ಬಳಕೆಯಲ್ಲಿತ್ತು ಮತ್ತು ಈಗ ಇವುಗಳ ಬದಲು ಐಎನ್ಎಸ್ಎಎಸ್ (ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್) ಮತ್ತು ಎಸ್ಎಲ್ಆರ್ (ಸೆಲ್ಫ್-ಲೋಡಿಂಗ್ ರೈಫಲ್ಸ್) ಅನ್ನು ಬಳಕೆ ಮಾಡಲಾಗುತ್ತಿದೆ” ಎಂದು ಪೊಲೀಸ್ ಅಧೀಕ್ಷಕ ಅಮಿತ್ ವರ್ಮಾ ಹೇಳಿದ್ದಾರೆ.
45,000 ರೈಫಲ್ಗಳನ್ನು ರಾಜ್ಯ ಪೊಲೀಸರು ಬಳಸುತ್ತಿದ್ದಾರೆ ಎಂದು ವರ್ಮಾ ಹೇಳಿದ್ದಾರೆ, ನಿಖರತೆ ಮತ್ತು ದೃಢತೆಯಿಂದಾಗಿ ಕಾನ್ಸ್ಟೆಬಲ್ಗಳಿಗೆ ಈ ಮಾದರಿಯು ಅಚ್ಚುಮೆಚ್ಚಿನದಾಗಿದೆ.
“ಈ 30 ರೈಫಲ್ ಅದ್ಭುತ ಆಯುಧವಾಗಿದ್ದು, ಈ ಹಿಂದೆ ವಿವಿಧ ಕಾರ್ಯಾಚರಣೆಗಳಲ್ಲಿ ನಮಗೆ ಅದ್ಭುತ ಸೇವೆ ಸಲ್ಲಿಸಿದೆ” ಎಂದು ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಬಿಜಯಾ ಕುಮಾರ್ ಮೌರ್ಯ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.