ನವದೆಹಲಿ: ಭಾರತದ 71 ನೇ ಗಣರಾಜ್ಯೋತ್ಸವ ಅಂಗವಾಗಿ ತಿರಂಗಾದಲ್ಲಿ ಬೆಳಗಿದ ಇಂಡಿಯಾ ಗೇಟ್ನ ವಿಶೇಷವಾಗಿ ವಿನ್ಯಾಸಗೊಳಿಸಲಾದ ಇಮೋಜಿಯನ್ನು ಟ್ವಿಟರ್ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿದೆ.
ಟ್ವಿಟರ್ ಇಂಡಿಯಾ ಪ್ರಕಾರ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜನವರಿ 25 ರಂದು ರಾಷ್ಟ್ರವನ್ನುದ್ದೇಶಿಸಿ ಈ ಇಮೋಜಿಯೊಂದಿಗೆ ಟ್ವೀಟ್ ಮಾಡಲಿದ್ದಾರೆ.
“2020 ರ ಗಣರಾಜ್ಯೋತ್ಸವದ ಇಮೋಜಿ, ವಿವಿಧ ಭಾಷೆ, ವಿವಿಧ ಸಂಸ್ಕೃತಿಯನ್ನು ಒಳಗೊಂಡ ಭಾರತೀಯತೆಯನ್ನು ಪ್ರತಿಧ್ವನಿಸಲಿದೆ. ಸಾರ್ವಜನಿಕ ಸಂವಹನವನ್ನು ಆಚರಿಸಲು ಮತ್ತು ಅದರಲ್ಲಿ ಭಾಗವಹಿಸಲು ದಾರಿ ಮಾಡಿಕೊಡುತ್ತದೆ” ಎಂದು ಹಿರಿಯ ಟ್ವಿಟರ್ ಅಧಿಕಾರಿ ಮಹೀಮಾ ಕೌಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಮೋಜಿಗಳು ಇಂಗ್ಲಿಷ್ ಮತ್ತು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಬಂಗಾಳಿ, ಗುಜರಾತಿ, ಉರ್ದು ಮತ್ತು ಗುರ್ಮುಖಿ ಸೇರಿದಂತೆ ಹತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಿರಲಿದೆ.
ಇದು ಜನವರಿ 30 ರವರೆಗೆ ಲೈವ್ ಆಗಿರುತ್ತದೆ.
ಕಸ್ಟಮ್ ಇಮೋಜಿಯೊಂದಿಗೆ ಭಾರತದಲ್ಲಿ ಗಣರಾಜ್ಯೋತ್ಸವವನ್ನು ಟ್ವಿಟರ್ ಬೆಂಬಲಿಸುತ್ತಿರುವುದು ಇದು ಐದನೇ ವರ್ಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.