ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಯೋಧರಿಗಾಗಿ ಭಾರತೀಯ ಸೇನೆಯು ತಲಾ ಒಂದು ಲಕ್ಷ ರೂ. ಮೌಲ್ಯದ ಚಳಿಗಾಲದ ಪರಿಕರಗಳನ್ನು ಹಂಚಿಕೆ ಮಾಡಿದೆ. ಕೊರೆಯುವ ಚಳಿಯಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಇದು ಯೋಧರಿಗೆ ಸಹಾಯಕವಾಗಲಿದೆ.
ಹಿಮದಿಂದ ಆವೃತವಾಗಿರುವ ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಯೋಧರು ಚಳಿಗಾಲದ ಸಂದರ್ಭದಲ್ಲಿ ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಯೋಧರಿಗೆ ಒಂದು ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ಚಳಿಗಾಲದ ಪರಿಕರಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜನವರಿ ಎರಡನೇ ವಾರದಲ್ಲಿ ಸಿಯಾಚಿನ್ಗೆ ಭೇಟಿ ನೀಡಿರುವ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಯೋಧರಿಗೆ ಹಂಚಿಕೆ ಮಾಡಲಾದ ಚಳಿಗಾಲದ ಪರಿಕರಗಳನ್ನು ಪರಿಶೀಲನೆ ನಡೆಸಿದರು.
ಚಳಿಗಾಲದ ಪರಿಕರಗಳಲ್ಲಿ 28 ಸಾವಿರ ರೂಪಾಯಿ ಮೌಲ್ಯದ ತೀವ್ರ ಚಳಿಯಿಂದ ರಕ್ಷಣೆ ಪಡೆಯುವ ಧಿರಿಸು, 13 ಸಾವಿರ ರೂಪಾಯಿ ಮೌಲ್ಯದ ಸ್ಲೀಪಿಂಗ್ ಬ್ಯಾಗ್ ಸೇರಿದಂತೆ ಹಲವು ಸಾಮಾಗ್ರಿಗಳು ಇವೆ.
ಡೌನ್ ಜಾಕೆಟ್ ಮತ್ತು ವಿಶೇಷ ಗ್ಲೌಸ್ ಬೆಲೆ ರೂಪಾಯಿ 14,000. ಬಹುಪಯೋಗಿ ಶೂ ಬೆಲೆ 12,500 ರೂಪಾಯಿ ಎಂದು ಮೂಲಗಳು ತಿಳಿಸಿವೆ.
50000 ರೂಪಾಯಿ ಮೌಲ್ಯದ ಆಕ್ಸಿಜನ್ ಸಿಲಿಂಡರ್ ಅನ್ನೂ ಯೋಧರಿಗೆ ವಿತರಣೆ ಮಾಡಲಾಗಿದೆ. ಸಿಯಾಚಿನ್ನಂತಹ ಹಿಮಾವೃತ ಪ್ರದೇಶದಲ್ಲಿ ಆಕ್ಸಿಜನ್ ಸಿಲೆಂಡರ್ ಅಗತ್ಯವಾಗಿದೆ.
ಹಿಮಪಾತದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುವ ಪರಿಕರಗಳನ್ನು ಕೂಡ ಒದಗಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.