ನವದೆಹಲಿ: ದೇಶಕಂಡ ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ನೇತಾಜೀ ಅವರ ವೀರತೆಯನ್ನು ಕೊಂಡಾಡಿದ್ದಾರೆ.
ವಿಡಿಯೋವನ್ನು ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ವಸಾಹತುಶಾಹಿಯನ್ನು ನಿರ್ಮೂಲನೆಗೊಳಿಸಲು ಅವರು ನೀಡಿದ ಕೊಡುಗೆಗಳಿಗಾಗಿ ಭಾರತ ಯಾವಾಗಲೂ ಕೃತಜ್ಞವಾಗಿರುತ್ತದೆ. ಅವರು ತಮ್ಮ ಸಹ ಭಾರತೀಯರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಅಚಲವಾಗಿ ನಿಂತಿದ್ದರು” ಎಂದಿದ್ದಾರೆ.
India will always remain grateful to Netaji Subhas Chandra Bose for his bravery and indelible contribution to resisting colonialism. He stood up for the progress and well-being of his fellow Indians. pic.twitter.com/otUlFanULs
— Narendra Modi (@narendramodi) January 23, 2020
ಅಲ್ಲದೇ, “1897ರ ಜನವರಿ 23ರಂದು ಜಾನಕೀನಾಥ್ ಬೋಸ್ ಅವರು ತಮ್ಮ ಡೈರಿಯಲ್ಲಿ ‘ಮಧ್ಯಾಹ್ನದಲ್ಲಿ ಮಗ ಜನಿಸಿದ’ ಎಂದು ಬರೆದಿಟ್ಟಿದ್ದರು. ಆ ಮಗ ಒಬ್ಬ ಧೀರ ಸ್ವಾತಂತ್ರ್ಯ ಹೋರಾಟಗಾರ ಮತ್ತು ಚಿಂತಕನಾದ, ಅವನು ತನ್ನ ಜೀವನವನ್ನು ಒಂದು ದೊಡ್ಡ ಕಾರಣಕ್ಕಾಗಿ ಮೀಸಲಿಟ್ಟ. ಆ ಕಾರಣವೇ ಭಾರತದ ಸ್ವಾತಂತ್ರ್ಯ. ಅವರ ಜಯಂತಿಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ” ಎಂದಿದ್ದಾರೆ.
On 23rd January 1897, Janakinath Bose wrote in his diary, “A son was born at midday.”
This son became a valorous freedom fighter and thinker who devoted his life towards one great cause- India’s freedom.
I refer to Netaji Bose, who we proudly remember on his Jayanti today. pic.twitter.com/wp3UjudKJ4
— Narendra Modi (@narendramodi) January 23, 2020
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟ್ವಿಟ್ ಮಾಡಿ, “ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ನಮ್ಮ ಗೌರವಾರ್ಪಣೆ. ಅವರು ನಮ್ಮ ಅತ್ಯಂತ ಪ್ರೀತಿಯ ರಾಷ್ಟ್ರೀಯ ವೀರರಲ್ಲಿ ಒಬ್ಬರಾಗಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದ್ದಾರೆ. ಅವರ ಮಾತಿಗೆ ಓಗೊಟ್ಟು ಲಕ್ಷಾಂತರ ಭಾರತೀಯರು ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಿಕೊಂಡರು ಮತ್ತು ತಮ್ಮನ್ನು ದೇಶಕ್ಕಾಗಿ ಸಮರ್ಪಿಸಿಕೊಂಡರು. ಅವರ ಧೈರ್ಯ ಮತ್ತು ದೇಶಭಕ್ತಿ ನಮಗೆ ಸ್ಫೂರ್ತಿ ನೀಡುತ್ತದೆ” ಎಂದಿದ್ದಾರೆ.
Tributes to Netaji Subhas Chandra Bose on his birth anniversary. He remains one of our most beloved national heroes and an icon of India’s freedom struggle. At his word, millions of Indians joined the freedom movement and gave their all. His courage and patriotism inspire us.
— President of India (@rashtrapatibhvn) January 23, 2020
ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಭಾರತವನ್ನು ಆಂಗ್ಲರ ಕಪಿಮುಷ್ಟಿಯಿಂದ ಮುಕ್ತಗೊಳಿಸಿದ ಮಹಾನ್ ದೇಶಭಕ್ತ ವೀರರ ಪೈಕಿ ಸುಭಾಷ್ ಚಂದ್ರ ಬೋಸ್ ಅವರು ಕೂಡ ಒಬ್ಬರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.