ಲಂಡನ್: ಇಂದು ಶಾಲಾ ಮಕ್ಕಳಿಂದ ವಯಸ್ಕರವರೆಗೆ ಪ್ರತಿಯೊಬ್ಬರೂ ವಿಷಯಗಳನ್ನು ಮರೆಯುವುದು ಸಾಮಾನ್ಯವಾಗಿದೆ. ಮನೆಯಿಂದ ಹೊರಟಾಗ ಮನಸ್ಸಿನಲ್ಲಿರುವ ವಿಷಯವನ್ನು ನಿರ್ದಿಷ್ಟ ಸ್ಥಳಕ್ಕೆ ತಲುಪುತ್ತಿರುವಾಗಲೇ ಮರೆತು ಬಿಡುತ್ತಾರೆ. ಈ ಮರೆಗುಳಿ ಕಾಯಿಲೆಗೆ ಆಲ್ಜೈಮರ್ ಎಂದು ಕರೆಯುತ್ತಾರೆ.
ಭಾರತೀಯ ಮೂಲದ ಬ್ರಿಟನ್ನಲ್ಲಿ ನೆಲೆಸಿರುವ 15 ವರ್ಷದ ಬಾಲಕ ಕ್ರಿಟಿನ್ ನಿತ್ಯಾನಂದನ್ ಈ ಮರೆಗುಳಿ ಕಾಯಿಲೆ (ಆಲ್ಜೈಮರ್)ಗೆ ಪರಿಹಾರ ಕಂಡು ಹಿಡಿದಿದ್ದಾನೆ. ಅಲ್ಲದೇ ಈ ಕಾಯಿಲೆಯ ಲಕ್ಷಣಗಳನ್ನು 10 ವರ್ಷ ಮೊದಲೇ ಗುರುತಿಸಿ ತಡೆಗಟ್ಟುವ ವಿಧಾನ ಕಂಡು ಹಿಡಿದಿದ್ದಾನೆ. ಇದರ ವರದಿಗಳನ್ನು ಗೂಗಲ್ ಸೈನ್ಸ್ ಫೇರ್ ಪ್ರೈಜ್ಗೆ ಕಳುಹಿಸಲಾಗಿದ್ದು, ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದೆ.
ಈ ಕಾಯಿಲೆಗೆ ನಿತ್ಯಾನಂದನ್ ಟ್ರೋಜನ್ ಹಾರ್ಸ್ ಎಂಬ ಪ್ರತಿಕಾಯವನ್ನು ಕಂಡು ಹಿಡಿದಿದ್ದು, ಇದು ಮೆದುಳನ್ನು ಹೊಕ್ಕು ಅಲ್ಲಿರುವ ಅಲ್ಜೈಮರ್ ಕಾಯಿಲೆ ಹರಡುವ ನ್ಯೂರೋಟಾಕ್ಸಿಕ್ ಪ್ರೋಟೀನ್ಗಳ ಜೊತೆ ಕೂಡಿಕೊಳ್ಳುತ್ತವೆ. ಇದರಿಂದ ಪ್ರಥಮ ಹಂತದಲ್ಲಿ ಈ ರೀತಿಯ ಕಾಯಿಲೆಗಳೇನಾದರೂ ಇದ್ದರೆ ಅವು ಗುರುತಿಸಲ್ಪಟ್ಟು ಅದಕ್ಕೆ ಪರಿಹಾರವೂ ಸುಲಭವಾಗಿ ಸಿಗುತ್ತದೆ ಎಂಬುದನ್ನು ಈತ ತನ್ನ ಸಂಶೋಧನೆಯಲ್ಲಿ ವಿವರಿಸಿದ್ದಾನೆ.
ವೈದ್ಯಕೀಯ ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಬೇಕೆಂಬ ಛಲವಿರುವ ನಿತ್ಯಾನಂದನ್ ಮೆದುಳಿನ ಅಧ್ಯಯನದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.