ಕೋಲ್ಕತ್ತಾ: “ಹೌದು, ನಾನು ಪಾಕಿಸ್ಥಾನಿ. ಬಿಜೆಪಿಯವರು ಏನು ಬೇಕಾದರು ಮಾಡಿಕೊಳ್ಳಲಿ. ಯಾರೊಬ್ಬರೂ ಅವರ ಬಗ್ಗೆ ಹೆದರುವುದಿಲ್ಲ” ಎಂದು ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ ಅನ್ನು ದೇಶದಾದ್ಯಂತ ಅನುಷ್ಠಾನ ಮಾಡುವುದಕ್ಕೆ ನಾವು ವಿರೋಧಿಸುತ್ತೇವೆ, ಪ್ರತಿಭಟನೆ ಮುಂದುವರೆಸುತ್ತೇವೆ” ಎಂದಿದ್ದಾರೆ.
ಕೋಲ್ಕತ್ತಾದ ಬಸಿರ್ಹಾತ್ನಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾಡತನಾಡಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
“ನಾನು ಪಾಕಿಸ್ಥಾನಿ, ನೀವು ಏನು ಬೇಕಾದರೂ ಮಾಡಿ. ಈ ದೇಶ ನರೇಂದ್ರ ಮೊದಿ ಮತ್ತು ಅಮಿತ್ ಶಾ ಖಾಸಗಿ ಆಸ್ತಿಯಲ್ಲ” ಎಂದಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕನಾಗಿರುವ ಅಧೀರ್ ರಂಜನ್ ಚೌಧರಿ ಅವರು, ಬಿಜೆಪಿಗೆ ಸವಾಲೊಡ್ಡುವ ಭರದಲ್ಲಿ ತನ್ನನ್ನು ತಾನು ಪಾಕಿಸ್ಥಾನಿ ಎಂದು ಹೇಳಿಕೊಂಡಿರುವುದು ಮತ್ತೊಂದು ಸುತ್ತಿನ ವಿವಾದವನ್ನು ಸೃಷ್ಟಿಸಿದೆ.
ಈ ಹಿಂದೆ ಮೋದಿ, ಶಾ ಒಳನುಸುಳುಕೋರರು ಎಂದು ಹೇಳುವ ಮೂಲಕ ಇವರು ವಿವಾದವನ್ನು ಸೃಷ್ಟಿಸಿದ್ದರು. ಮಾತ್ರವಲ್ಲದೇ, ಜಮ್ಮು ಕಾಶ್ಮೀರ ಭಾರತದ ಆಂತರಕ ವಿಷಯವಲ್ಲ ಎನ್ನುವ ಮೂಲಕ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.