ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಭಾನುವಾರ ಟೋಲ್ ಶುಲ್ಕದ ಮೂಲಕ 86.2 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಅದರ ಅಧ್ಯಕ್ಷ ಸುಖಬೀರ್ ಸಿಂಗ್ ಸಂಧು ಹೇಳಿದ್ದಾರೆ.
“ಎರಡು ದಿನಗಳ ಹಿಂದೆ ಎನ್ಎಚ್ಎಐ ದೈನಂದಿನ ಆಧಾರದಲ್ಲಿ ತನ್ನ ಅತಿ ಹೆಚ್ಚು ಟೋಲ್ ಸಂಗ್ರಹ ಅಂದರೆ 86.2 ಕೋಟಿ ರೂ.ಅನ್ನು ದಾಖಲಿಸಿದೆ” ಎಂದು ಸಂಧು ಮಂಗಳವಾರ ನ್ಯಾಷನಲ್ ಹೈವೇ ಎಕ್ಸಲೆನ್ಸ್ ಅವಾರ್ಡ್ 2019 ರಲ್ಲಿ ಹೇಳಿದರು.
ಫಾಸ್ಟ್ಟ್ಯಾಗ್ಗಳ ಹೊಸ ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ದೈನಂದಿನ ಟೋಲ್ ಸಂಗ್ರಹವು 2019 ರ ನವೆಂಬರ್ನಲ್ಲಿ ಇದ್ದ 23 ಕೋಟಿ ರೂ.ಗೆ ಹೋಲಿಸಿದರೆ ಈ ವರ್ಷದ ಜನವರಿಯಲ್ಲಿ 50 ಕೋಟಿ ರೂ. (ಒಂದೇ ದಿನದ ಸಂಗ್ರಹ) ಕ್ಕೆ ಏರಿಕೆಯಾಗಿದೆ.
ಫಾಸ್ಟ್ಟ್ಯಾಗ್ಗಳನ್ನು ಬಳಸುವ ದೈನಂದಿನ ವಹಿವಾಟುಗಳು ಕಳೆದ ವರ್ಷ ಜುಲೈನಲ್ಲಿ ಇದ್ದ 8 ಲಕ್ಷದಿಂದ ಜನವರಿಯಲ್ಲಿ ದಿನಕ್ಕೆ ಸುಮಾರು 30 ಲಕ್ಷಕ್ಕೆ ಏರಿದೆ ಎಂದು ಸಂಧು ಮಾಹಿತಿ ನೀಡಿದರು.
2019ರ ಡಿಸೆಂಬರ್ ಅಂತ್ಯದ ವೇಳೆಗೆ, 2019 ರ ನವೆಂಬರ್ ಮತ್ತು ಡಿಸೆಂಬರ್ನಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಸ್ಟ್ಟ್ಯಾಗ್ಗಳನ್ನು ನೀಡಲಾಗಿದ್ದರಿಂದ ಫಾಸ್ಟ್ಟ್ಯಾಗ್ಗಳ ಸಂಖ್ಯೆ 1 ಕೋಟಿಗಿಂತ ಹೆಚ್ಚಿತ್ತು, ಒಂದು ದಿನದಲ್ಲಿ 1.5-2 ಲಕ್ಷದಷ್ಟು ಫಾಸ್ಟ್ಟ್ಯಾಗ್ಗಳ ಮಾರಾಟ ಹೆಚ್ಚಾಗಿದೆ.
ಕೇಂದ್ರ ಸರ್ಕಾರ ಕಳೆದ ವರ್ಷ ಡಿಸೆಂಬರ್ 15 ರಂದು ಎನ್ಎಚ್ಎಐನ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಸೂಚನೆಯನ್ನು ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.