ನವದೆಹಲಿ: ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ರವಾನಿಸಿರುವ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರು, ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಸೇನಾಪಡೆಗಳು ಮುಂದುವರೆಸಲಿವೆ ಮತ್ತು ಭವಿಷ್ಯದಲ್ಲಿ ಎದುರಾಗುವ ಯಾವುದೇ ಯುದ್ಧಕ್ಕೂ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
72ನೇ ಸೇನಾ ದಿನದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಭಾರತೀಯ ಸೇನೆಯು ಸದಾ ಜಾಗೃತ ಸ್ಥಿತಿಯಲ್ಲಿ ಇದ್ದು, ಜಾಗತಿಕ ಬೆಳವಣಿಗೆಗಳ ಬಗ್ಗೆ ಗಮನವನ್ನು ನೆಟ್ಟಿದೆ. ಭಯೋತ್ಪಾದನೆಯ ಬಗೆಗಿನ ಶೂನ್ಯ ಸಹಿಷ್ಣುತೆ ನೀತಿಗೆ ನಾವು ಬದ್ಧವಾಗಿದ್ದೇವೆ ಮತ್ತು ನೆರೆ ರಾಷ್ಟ್ರದ ಒಳನುಸುಳುವಿಕೆಯ ಸಂಚನ್ನು ವಿಫಲಗೊಳಿಸಲು ಸದಾ ಜಾಗೃತವಾಗಿದೆ” ಎಂದಿದ್ದಾರೆ.
“ಭಯೋತ್ಪಾದನೆಯನ್ನು ನಿರ್ವಹಿಸಲು ಹಲವಾರು ಕ್ರಮಗಳಿವೆ, ಭಾರತೀಯ ಸೇನೆಯು ಯಾವುದೇ ಸವಾಲನ್ನು ಮೆಟ್ಟಿ ನಿಲ್ಲಲು ಸಿದ್ಧವಿದೆ” ಎಂದಿದ್ದಾರೆ.
ಭಾರತೀಯ ಯೋಧರು ಸೇನೆಯ ಶಕ್ತಿ ಎಂದ ನರವಾಣೆ, ಗಡಿಗಳನ್ನು ಸಮರ್ಥವಾಗಿ ಕಾಪಾಡಲಾಗುತ್ತಿದೆ ಮತ್ತು ಸೇನೆ ಭವಿಷ್ಯದ ಯುದ್ಧಗಳನ್ನು ಎದುರಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಸೇನಾ ದಿನದ ಅಂಗವಾಗಿ ಸೇನಾ ಮುಖ್ಯಸ್ಥರು ಯೋಧರು ಮತ್ತು ಅವರ ಪರಿವಾರದವರಿಗೆ ಶುಭಾಶಯಗಳನ್ನು ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.