ಶ್ರೀನಗರ: ಸಂವಿಧಾನದ 370ನೇ ವಿಧಿಯ ರದ್ದತಿ ಬಳಿಕ ಇಂಟರ್ನೆಟ್ ಸಂಪರ್ಕದಿಂದ ವಂಚಿತಗೊಂಡಿದ್ದ ಜಮ್ಮು-ಕಾಶ್ಮೀರದಲ್ಲಿ ಇದೀಗ ಮತ್ತೆ ಇಂಟರ್ನೆಟ್ ಸಂಪರ್ಕ ಪ್ರಾರಂಭವಾಗುತ್ತಿದೆ. ಆಸ್ಪತ್ರೆ ಮತ್ತು ಹೋಟೆಲ್ಗಳಲ್ಲಿ, ಟ್ರಾವೆಲ್ ಏಜೆನ್ಸಿಗಳಲ್ಲಿ ಬ್ರಾಡ್ಬ್ಯಾಂಡ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಈ ಬಗ್ಗೆ ಅಲ್ಲಿನ ಆಡಳಿತ ಮೂರು ಪುಟಗಳ ಆದೇಶವನ್ನು ಹೊರಡಿಸಿದ್ದು, ಸುಮಾರು 400 ಇಂಟರ್ನೆಟ್ kiosks ಗಳನ್ನು ಕಾಶ್ಮೀರ ವಿಭಾಗದಲ್ಲಿ ಸ್ಥಾಪಿಸುವುದಾಗಿ ಹೇಳಿದೆ. ಸೋಶಿಯಲ್ ನೆಟ್ವರ್ಕಿಂಗ್ ವೆಬ್ಸೈಟ್ಗಳ ಪ್ರವೇಶವನ್ನು ಸಂಪೂರ್ಣ ನಿಯಂತ್ರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಅತ್ಯಗತ್ಯ ಸೇವೆಗಳು, ಆಸ್ಪತ್ರೆಗಳು ಬ್ಯಾಂಕು ಮತ್ತು ಇತರ ಸರ್ಕಾರಿ ಕಚೇರಿಗಳಲ್ಲಿ ಬ್ರಾಡ್ಬ್ಯಾಂಡ್ ಸೌಲಭ್ಯವನ್ನು ಇಂಟರ್ನೆಟ್ ಸೇವಾ ಪೂರೈಕೆದಾರರು ಒದಗಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಅಲ್ಲದೆ ಜಮ್ಮು, ಸಾಂಬಾ, ಕತುವ, ಉದಂಪೂರ್ ಮತ್ತು ರಿಸಾಯಿ ಜಿಲ್ಲೆಗಳಲ್ಲಿ 2g ಇಂಟರ್ನೆಟ್ ಮೊಬೈಲ್ ಸೇವೆಯನ್ನು ಆರಂಭಿಸಲು ಆಡಳಿತ ನಿರ್ಧರಿಸಿದೆ. ವೈಟ್ ಲಿಸ್ಟ್ ವೆಬ್ಸೈಟ್, ಇ-ಬ್ಯಾಂಕಿಂಗ್ ಸೇವೆಗಳಿಗೆ ಮಾತ್ರ ಇದು ಲಭ್ಯವಿರಲಿದೆ.
370 ನೇ ವಿಧಿ ರದ್ದತಿಯ ಬಳಿಕ ಸ್ಥಗಿತಗೊಳಿಸಲಾಗಿದೆ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬೆಳವಣಿಗೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.