ನವದೆಹಲಿ: ಇ-ಕಾಮರ್ಸ್ ದಿಗ್ಗಜ ಅಮೆಜಾನ್ನ ಜಾಗತಿಕ ಸಿಇಓ ಜೆಫ್ ಬೆಜೊಸ್ ಅವರು ಭಾರತ ಪ್ರವಾಸದಲ್ಲಿದ್ದು, ಮಂಗಳವಾರ ರಾಜಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ನಮನಗಳನ್ನು ಸಲ್ಲಿಸಿದರು.
ಜಾಗತಿಕ ಬಿಲಿಯನೇರ್ಗಳ ಪೈಕಿ ಸ್ಥಾನವನ್ನು ಪಡೆದುಕೊಂಡಿರುವ ಜೆಫ್ ಬೆಜೊಸ್ ಅವರು, ಟ್ವಿಟರ್ ಮೂಲಕ ತಾವು ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಜೆಫ್ ಬೆಜೊಸ್ ಅವರು ಬಿಳಿ ಕುರ್ತಾ ಮತ್ತು ಪೈಜಾಮ ಧರಿಸಿದ್ದಾರೆ, ಸ್ಮಾರಕಕ್ಕೆ ಮಾಲಾರ್ಪಣೆಯನ್ನು ಮಾಡಿದ್ದಾರೆ.
ಈಗಷ್ಟೇ ಭಾರತಕ್ಕೆ ಬಂದಿದ್ದೇನೆ ಮತ್ತು ಜಗತ್ತನ್ನು ಬದಲಾಯಿಸಿದ ಮಹಾತ್ಮ ಗಾಂಧಿಗೆ ಗೌರವವನ್ನು ಸಲ್ಲಿಸಿದ್ದೇನೆ. “ನಾಳೆಯ ಸಾಯುತ್ತೇನೆ ಎಂಬಂತೆ ಜೀವಿಸಿ ಮತ್ತು ಸಾವೇ ಇಲ್ಲ ಎಂಬಂತೆ ಕಲಿಯಿರಿ”-ಮಹಾತ್ಮ ಗಾಂಧಿ – ಎಂದು ಜೆಫ್ ಬೆಜೊಸ್ ಟ್ವೀಟ್ ಮಾಡಿದ್ದಾರೆ.
Just landed in India and spent a beautiful afternoon paying my respects to someone who truly changed the world. “Live as if you were to die tomorrow. Learn as if you were to live forever.” – Mahatma Gandhi. pic.twitter.com/xDXAT9cBgf
— Jeff Bezos (@JeffBezos) January 14, 2020
ಮಂಗಳವಾರದಿಂದ ಜೆಫ್ ಬೆಜೊಸ್ ಅವರು ಮೂರು ದಿನಗಳ ಭಾರತ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ ಅಮೆಜಾನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ ಮತ್ತು ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಭಾರತದ ಉನ್ನತ ಉದ್ಯಮಿಗಳನ್ನು ಮತ್ತು ಬಾಲಿವುಡ್ ಸೆಲೆಬ್ರಿಟಿಗಳನ್ನು ಕೂಡ ಅವರು ಭೇಟಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.