ನವದೆಹಲಿ: ದೇಶದಾದ್ಯಂತ ಇಂದು ಮಕರ ಸಂಕ್ರಮಣ, ಮಾಘ ಬಿಹು ಮತ್ತು ಪೊಂಗಲ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, “ಪ್ರಕೃತಿಯ ಚಿತ್ತಾರ, ಪರಂಪರೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುವ ಮಕರ ಸಂಕ್ರಮಣ ನಿಮ್ಮೆಲ್ಲರಿಗೂ ಸಮೃದ್ಧಿ ಮತ್ತು ಸಂತೋಷವನ್ನು ತರಲಿ” ಎಂದಿದ್ದಾರೆ.
प्रकृति, परंपरा और संस्कृति के रंगों से भरे मंगल पर्व मकर संक्रांति की आप सभी को हार्दिक शुभकामनाएं। pic.twitter.com/F7dUZLzHEO
— Narendra Modi (@narendramodi) January 15, 2020
ಪ್ರಮುಖವಾಗಿ ಅಸ್ಸಾಂನಲ್ಲಿ ಆಚರಿಸಲಾಗುವ ಮಾಘ ಬಿಹು ಹಬ್ಬದ ಪ್ರಯುಕ್ತ ಮೋದಿ ಶುಭಾಶಯಗಳನ್ನು ಕೋರಿದ್ದಾರೆ.
ತಮಿಳುನಾಡು ಸೇರಿದಂತೆ ದೇಶದ ಕೆಲವೆಡೆ ಆಚರಿಸಲಾಗುವ ಪೊಂಗಲ್ ಹಬ್ಬಕ್ಕೆ ಶುಭಾಶಯ ಕೋರಿರುವ ಅವರು, “ಎಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳು. ಈ ಹಬ್ಬ ಎಲ್ಲರ ಬದುಕಿನಲ್ಲೂ ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಆರೋಗ್ಯ ಪ್ರಾಪ್ತಿಯಾಗಲಿ” ಎಂದಿದ್ದಾರೆ.
ಮಕರ ಸಂಕ್ರಮಣವೂ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಸೂರ್ಯನನ್ನು ಪ್ರಾರ್ಥಿಸುವ ಹಬ್ಬ ಇದಾಗಿದೆ. ಸುಗ್ಗಿಯನ್ನು ಸಂಭ್ರಮಿಸುವ ಹಬ್ಬವೂ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.