ನವದೆಹಲಿ: ನಿರ್ಭಯಾ ಅತ್ಯಾಚಾರಿಗಳು ಸಲ್ಲಿಸಿರುವ ಕ್ಯುರೇಟಿವ್ ಪಿಟಿಷನ್ ಅನ್ನು ತಿರಸ್ಕರಿಸುವ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಜನವರಿ 22ಕ್ಕೆ ಇವರ ಗಲ್ಲುಶಿಕ್ಷೆ ನಿರ್ಧಾರವಾಗಿದೆ.
ದೆಹಲಿ ನ್ಯಾಯಾಲಯದ ಇವರ ವಿರುದ್ಧ ಡೆತ್ ವಾರೆಂಟ್ ಬಿಡುಗಡೆ ಮಾಡಿ, ಜನವರಿ 22 ರಂದು ಗಲ್ಲು ಶಿಕ್ಷೆ ಘೋಷಿಸಿದ ಬಳಿಕ ಇಬ್ಬರು ಆರೋಪಿಗಳು ಸುಪ್ರೀಂಕೋರ್ಟಿಗೆ ಕ್ಯುರೇಟಿವ್ ಪಿಟಿಷನ್ ಸಲ್ಲಿಸಿದ್ದರು. ಇದನ್ನು ಇಂದು ವಜಾಗೊಳಿಸಲಾಗಿದೆ.
ನ್ಯಾಯಮೂರ್ತಿ ಎನ್.ವಿ.ರಮಣ, ಅರುಣ್ ಮಿಶ್ರಾ, ರೋಹಿಂಟನ್ ನಾರಿಮನ್, ಆರ್.ಭಾನುಮತಿ, ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಈ ಅರ್ಜಿಗಳನ್ನು ಆಲಿಸಿತು.
ಮುಖ್ಯವಾಗಿ, ಕ್ಯುರೇಟಿವ್ ಪಿಟಿಷನ್ ಕುಂದುಕೊರತೆಗಳ ಪರಿಹಾರಕ್ಕಾಗಿ ಲಭ್ಯವಿರುವ ಕೊನೆಯ ನ್ಯಾಯಾಂಗ ಪ್ರಕ್ರಿಯೆ ಆಗಿದೆ. ಇನ್ನು, ಅಪರಾಧಿಗಳು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಅಧಿಕಾರ ಹೊಂದಿರುವ ರಾಷ್ಟ್ರಪತಿಗಳ ಮುಂದೆ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಬ್ಲ್ಯಾಕ್ ವಾರೆಂಟ್ ವಾರೆಂಟ್ ನೀಡಿದ ಬಳಿಕ ನ್ಯಾಯಾಲಯವು ಇವರುಗಳಿಗೆ ಕ್ಯುರೇಟಿವ್ ಮತ್ತು ಕ್ಷಮಾಧಾನ ಅರ್ಜಿ ಸಲ್ಲಿಸಲು ಎರಡು ವಾರಗಳ ಸಮಾಯಾವಕಾಶವನ್ನು ನೀಡಿತ್ತು.
ಅತ್ಯಾಚಾರಿಗಳಾದ ವಿನಯ್ ಕುಮಾರ್ ಶರ್ಮಾ, ಮುಕೇಶ್, ಪವನ್, ಅಕ್ಷಯ್ ಇವರುಗಳನ್ನು ಒಂದೇ ದಿನ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.