ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ‘ಅಪರೂಪದ ಕಾಯಿಲೆಗಳ ನೀತಿ’ಯು ರಾಷ್ಟ್ರೀಯ ಆರೋಗ್ಯ ನಿಧಿ ಅಡಿಯಲ್ಲಿ 15 ಲಕ್ಷ ರೂ.ಗಳವರೆಗೆ ಹಣಕಾಸಿನ ನೆರವು ನೀಡಲು ಪ್ರಸ್ತಾಪಿಸಿದೆ. ಸ್ಟೆಮ್ ಸೆಲ್ ಕಸಿ ಮತ್ತು ಅಂಗಾಂಗ ಕಸಿ ಮುಂತಾದ ಕೆಲವು ಒನ್ ಟೈಮ್ ಚಿಕಿತ್ಸೆ ಅಗತ್ಯವಿರುವ ಕಾಯಿಲೆಗಳಿಗೆ ಈ ನಿಧಿ ಅಡಿಯಲ್ಲಿ ಚಿಕಿತ್ಸೆ ಸಿಗಲಿದೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಕರಡು ನೀತಿಯ ಪ್ರಕಾರ ಈ ಯೋಜನೆಯು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜಯ್) ಅಥವಾ ಆಯುಷ್ಮಾನ್ ಭಾರತ ಅನ್ವಯವಾಗುವ ರೋಗಿಗಳನ್ನು ಮಾತ್ರ ಒಳಗೊಳ್ಳುತ್ತದೆ.
ಆಯುಷ್ಮಾನ್ ಭಾರತ ಕೇಂದ್ರದ ಒಂದು ಪ್ರಮುಖ ಯೋಜನೆಯಾಗಿದ್ದು, ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷ ರೂ. ಚಿಕಿತ್ಸಾ ವೆಚ್ಚವನ್ನು ಇದು ಭರಿಸುತ್ತದೆ.
ರಾಷ್ಟ್ರೀಯ ಆರೋಗ್ಯ ನಿಧಿ ಅಡಿಯಲ್ಲಿನ ಉದ್ದೇಶಿತ ಆರ್ಥಿಕ ಬೆಂಬಲ ಯೋಜನೆಯಡಿ, MoHFWನಿಂದ ಗುಂಪು I ರ ಅಡಿಯಲ್ಲಿ ವರ್ಗೀಕರಿಸಲಾದ ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಹಣವನ್ನು ಒದಗಿಸಲಾಗುತ್ತದೆ. ಇದರಲ್ಲಿ ರೋಗನಿರೋಧಕ ಶಕ್ತಿ ಕುಂಠಿತ, ಫ್ಯಾಂಕೋನಿ ರಕ್ತಹೀನತೆ, ಯಕೃತ್ತಿನ ಅಸ್ವಸ್ಥತೆಗಳು ಮತ್ತು ಯಕೃತ್ತು ಅಥವಾ ಮೂತ್ರಪಿಂಡಗಳ ಸಮಸ್ಯೆ ಇತ್ಯಾದಿಗಳನ್ನು ಒಳಗೊಂಡಿದೆ.
ಆದರೂ, ವಾರ್ಷಿಕವಾಗಿ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗಿನ ಆಜೀವ ದುಬಾರಿ ಚಿಕಿತ್ಸೆಯ ಅಗತ್ಯವಿರುವ ಅಪರೂಪದ ಕಾಯಿಲೆಗಳಿಗೆ ಕೇಂದ್ರವು ಹಣವನ್ನು ಒದಗಿಸುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.