ನವದೆಹಲಿ: ಗುಜರಾತಿನ ಕೇವಾಡಿಯಾದಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಾಣವಾಗಿರುವ ವಿಶ್ವದ ಅತೀ ದೊಡ್ಡ ಪ್ರತಿಮೆ ‘ಏಕತಾ ಪ್ರತಿಮೆ’ಯು ಶಾಂಘೈ ಕೋಆಪರೇಶನ್ ಆರ್ಗನೈಝೇಶನಿನ ‘8 ವಂಡರ್ಸ್ ಆಫ್ ಎಸ್ಸಿಓ’ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಎಂಬುದಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಘೋಷಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಸದಸ್ಯ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮವನ್ನು ಬೆಳೆಸುವ ಎಸ್ಸಿಓ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ. ‘8 ವಂಡರ್ಸ್ ಆಫ್ ಎಸ್ಸಿಓ’ ಏಕತಾ ಪ್ರತಿಮೆಯನ್ನು ಒಳಗೊಂಡಿರುವುದು ನಿಜಕ್ಕೂ ಪ್ರೇರಣಾದಾಯಕ” ಎಂದಿದ್ದಾರೆ.
‘ಏಕತಾ ಪ್ರತಿಮೆ’ಯು ವಿಶ್ವದ ಅತೀದೊಡ್ಡ ಪ್ರತಿಮೆಯಾಗಿದ್ದು, 2018ರ ಅಕ್ಟೋಬರ್ ತಿಂಗಳಿನಲ್ಲಿ ಪಟೇಲರ 143ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಉದ್ಘಾಟಿಸಿದ್ದರು. ಈ ಪ್ರತಿಮೆ 182 ಮೀಟರ್ ಎತ್ತರವಿದೆ.
ಉದ್ಘಾಟನೆಗೊಂಡಾಗಿನಿಂದ ಇದು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ದಿನನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಬಂದು ಇದರ ಸೌಂದರ್ಯವನ್ನು ವೀಕ್ಷಣೆ ಮಾಡುತ್ತಾರೆ. ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಇದು ಕೂಡ ಹೆಸರು ಪಡೆದುಕೊಂಡಿದೆ.
Appreciated the #SCO’s efforts to promote tourism among member states. The “8 Wonders of SCO”, which includes the #StatueofUnity , will surely serve as an inspiration. pic.twitter.com/nmTbz6qIFg
— Dr. S. Jaishankar (@DrSJaishankar) January 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.